ಕನ್ನಡದ ‘ಆಕ್ಟ್ 1978’ ಸಿನಿಮಾ ಬಾಲಿವುಡ್ ಗೆ ರೀಮೇಕ್..!
ಲಾಕ್ ಡೌನ್ ಬಳಿಕ ಥಿಯೇಟರ್ ಗಳಲ್ಲಿ ಮೊದಲು ರಿಲೀಸ್ ಆಗಿದ್ದ ಕನ್ನಡದ ಸಿನಿಮಾ ಆಕ್ಟ್ 1978 ಸಿನಿಮಾ ಹಿಟ್ ಆಗಿತ್ತು. ಪ್ರೇಕ್ಷಕರಿಂದ ತಾರೆಯರಿಂದಲೂ ಒಳ್ಳೆ ರೆಸ್ಪಾನ್ಸ್ ಪಡೆದು ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾದಲ್ಲಿ ಕಾನೂನೂ, ಪ್ರಜೆ , ಪೊಲೀಸ್, ಸರ್ಕಾರದ ಸುತ್ತಲೂ ಕಥೆ ಹೆಣೆದಿದ್ದು, ಭ್ರಷ್ಟಾಚಾರದ ವಿರುದ್ಧ ಹೆಣ್ಣಿನ ಹೋರಾಟವನ್ನ ತೋರಿಸಲಾಗಿತ್ತು. ಯಜ್ಞಾ ಶೆಟ್ಟಿ ನಟಿಸಿ, ಮಂಸೋರೆ ನಿರ್ದೇಶನ ಮಾಡಿದ್ದ ಈ ಸಿನಿಮಾ ಭಿನ್ನ ಹಾಗೂ ಕುತೂಹಲಕಾರಿ ಕತೆಯನ್ನು ಹೊಂದಿತ್ತು. ಇದೀಗ ಈ ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದೆ.
ಸಿನಿಮಾದ ರೀಮೇಕ್ಹಕ್ಕು ಮಾರಾಟವಾಗಿದ್ದು, ಹಿಂದಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಆದ್ರೆ ಯಜ್ಞಾಶೆಟ್ಟಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಸದ್ಯಕ್ಕೆ ಇನ್ನೂ ಖಚಿತವಾಗಿಲ್ಲ. ಇನ್ನೂ ಅವಕಾಶ ಸಿಕ್ಕರೇ ಹಿಂದಿಯ ವರ್ಷನ್ ಗೂ ಖುದ್ದು ತಾವೇ ಆಕ್ಷನ್ ಕಟ್ ಹೇಳುವುದಾಗಿ ಮಂಸೂರೆ ಅವರು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.









