ಬಾಲಿವುಡ್ ನಟ ಅಮಿರ್ ಖಾನ್ ಕಾಂಗ್ರೆಸ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ರಾಜಕೀಯ ಜಾಹೀರಾತಿನಲ್ಲಿ ಕಾಂಗ್ರೆಸ್ ಡೀಪ್ ಫೇಕ್ ವಿಡಿಯೋ ಬಳಸಿಕೊಂಡಿದೆ ಎಂದು ದೂರು ದಾಖಲಿಸಿದ್ದಾರೆ.
ನಟ ಆಮಿರ್ ಖಾನ್ ಅವರು ಈ ಹಿಂದೆ ‘ಸತ್ಯಮೇವ್ ಜಯತೇ’ ಎಂಬ ಕಾರ್ಯಕ್ರಮ ಮಾಡಿದ್ದರು. ಆ ಕಾರ್ಯಕ್ರಮದ ದೃಶ್ಯವನ್ನೇ ಇಟ್ಟುಕೊಂಡು ಕಾಂಗ್ರೆಸ್, ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದೆ ಎಂದು ಅಮಿರ್ ಖಾನ್ ವಕ್ತಾರ ಮುಂಬೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಡೀಪ್ ಫೇಕ್ ಕಾಂಗ್ರೆಸ್ ಜಾಹೀರಾತಿನಲ್ಲಿ, ನಾಗರಿಕರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಜಮಾ ಮಾಡುವ ಬಿಜೆಪಿಯ ಭರವಸೆಯನ್ನು ನಟ ಆಮಿರ್ ಖಾನ್ ಟೀಕಿಸಿರುವುದು ಇದೆ. ಹೀಗಾಗಿ ಅಮಿರ್ ಖಾನ್ ಕಾಂಗ್ರೆಸ್ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.