ಮಡಿಕೇರಿ: ಇದೀಗಷ್ಟೇ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ “ಬಜಾರ್” ಚಿತ್ರ ಮುಗಿಸಿರುವ ಬೆಂಗಳೂರು ಮೂಲದ ನಟ ಧನ್ವೀರ್ ಗೌಡ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
ಕೊಡಗು ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅವಧಿ ಮೀರಿ ರಾತ್ರಿ ಸಫಾರಿ ನಡೆಸಿದ ಆರೋಪ ನಟ ಧನ್ವೀರ್‌ಗೌಡ ವಿರುದ್ಧ ಕೇಳಿ ಬಂದಿದೆ.
ವಿರಾಜಪೇಟೆ ಸಮೀಪದ ತಿತಿಮತಿಯ ಮತ್ತಿಗೋಡಿನ ಸಾಕಾನೆ ಶಿಬಿರಕ್ಕೆ ಅತಿಕ್ರಮ ಪ್ರವೇಶ ಮಾಡಿ ಸಾಕಾನೆ ಮಹೇಂದ್ರ ಮೇಲೆ ಏರಿ ನಟ ಧನ್ವೀರ್ ಗೌಡ ಸ್ನೇಹಿತರೊಂದಿಗೆ ಸವಾರಿ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಈ ಹಿನ್ನೆಲೆಯಲ್ಲಿ ಹುಣಸೂರು ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬAಧ ನಟ ಧನ್ವೀರ್ ಗೌಡ, ವಿಶ್ವಾಸ್ ಅಯ್ಯರ್, ದರ್ಶನ್ ಸೇರಿದಂತೆ 6 ಮಂದಿ ಮೇಲೆ ದೂರು ದಾಖಲಾಗಿದೆ. ಹಿರಿಯ ಅಧಿಕಾರಿಗಳ ಅನುಮತಿಯನ್ನೂ ಪಡೆಯದೆ ಆನೆ ಸಫಾರಿಗೆ ಸಹಕರಿಸಿದ ಮತ್ತಿಗೋಡಿನ ಸಾಕಾನೆ ಶಿಬಿರದ ಸಿಬ್ಬಂದಿಗಳಿಗೂ ನೋಟಿಸ್ ನೀಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel