ವೇದಿಕೆ ಮೇಲೆ ನಟ ದುನಿಯಾ ವಿಜಯ್ ಕಣ್ಣೀರು Saaksha Tv
ಬೆಂಗಳೂರು: ನಟ ದುನಿಯಾ ವಿಜಯ್ ಅವರು ನಿರ್ದೇಶಕರಾಗಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ಚಿತ್ರ ಸಲಗ. ಈ ಚಿತ್ರ ಸೂಪರ್ ಹಿಟ್ ಆಗಿದೆ.
ಈ ಚಿತ್ರದ ಯಶಸ್ಸನ್ನು ಎಲ್ಲರ ಜೊತೆ ಸೇರಿ ಸಂಭ್ರಮಿಸಲು ಕೊರೊನಾ ಮೂರನೇ ಅಲೆ ಅಡ್ಡ ಬಂದಿದ್ದು, ಈಗ ಕೊರೊನಾ ಹಾವಳಿ ಕಡಿಮೆ ಆಗಿರುವುದರಿಂದ ಅದ್ದೂರಿ ಕಾರ್ಯಕ್ರಮ ಮಾಡಿ ಸಕ್ಸಸ್ ಮೀಟ್ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಅನೇಕ ನಟರು ಆಗಮಿಸಿದ್ದರು. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ ಸೇರಿದಂತೆ ಅನೇಕ ಸ್ಟಾರ್ ನಟರು ಭಾಗವಹಿಸಿದ್ದರು.
ಈ ವೇದಿಕೆಯಲ್ಲಿ ಚಿತ್ರದ ಕುರಿತು ದುನಿಯಾ ವಿಜಯ್ ಮಾತನಾಡುವಾಗ ಭಾವುಕರಾದರು. ‘ಸಲಗ ಗೆದ್ದಿದೆ. ಈ ಕಾರ್ಯಕ್ರಮಕ್ಕೆ ನನ್ನ ಇಡೀ ತಂಡ ಬಂದಿದೆ. ನನ್ನ ಕುಟುಂಬದವರು ಬಂದಿದ್ದಾರೆ. ಚಿತ್ರರಂಗದ ಸ್ನೇಹಿತರು ಬಂದಿದ್ದಾರೆ. ಇದು ನನಗೆ ತುಂಬ ಎಮೋಷನಲ್ ವಿಷಯ. ಸಲಗ ಶುರು ಆಗುವುದಕ್ಕೂ ಮುನ್ನ ನಿರ್ಮಾಪಕ ಶ್ರೀಕಾಂತ್ ಅವರು, ಎಸ್ಎಲ್ವಿ ಮುಂದೆ ಇರುತ್ತಾರೆ ಅಂತ ಗೊತ್ತಿತ್ತು. ಅಲ್ಲಿಗೆ ನಾನು ಹೋದೆ. ನನ್ನ ಸಿನಿಮಾ ನಿರ್ಮಾಣ ಮಾಡಿ ಅಂತ ಕೇಳಿಕೊಳ್ಳೋಕೆ ಅಲ್ಲಿಗೆ ಹೋದೆ. ದೇವರಾಣೆ, ಅಂದು ನನ್ನ ಜೇಬಲ್ಲಿ ಇದ್ದಿದ್ದು 40 ರೂಪಾಯಿ ಮಾತ್ರ. ಈ ವಿಷಯ ನನಗೆ, ಕೀರ್ತಿಗೆ, ಸಾಮ್ರಾಟ್ ಗೆ ಮತ್ತು ಮೊಹಮ್ಮದ್ ಗೆ ಮಾತ್ರ ಗೊತ್ತು.
ಆ 40 ರೂಪಾಯಿಯನ್ನು ಫೋಟೋ ತೆಗೆದು ಇಟ್ಟಿದ್ದೇನೆ. ಮುಂದೆ ಈ ಜರ್ನಿಯಲ್ಲಿ ಅದರ ಬಗ್ಗೆ ಹೇಳುತ್ತೇನೆ’ ಎಂದು ದುನಿಯಾ ವಿಜಯ್ ಕಣ್ಣೀರು ಹಾಕಿದರು.









