ಗುಂಡೇಟು ತಗುಲಿ ಆಸ್ಪತ್ರೆ ಸೇರಿದ್ದ ಬಾಲಿವುಡ್ ನಟ ಗೋವಿಂದ (Actor Govinda) ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ. ಅ. 1ರಂದು ಮನೆಯಲ್ಲಿ ಬೆಳಗ್ಗೆ 4.45ರ ಸುಮಾರಿಗೆ ತಮ್ಮದೇ ಲೈಸೆನ್ಸ್ಡ್ ರಿವಾಲ್ವರ್ ಕ್ಲೀನ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಮಿಸ್ ಫೈರ್ ಆಗಿದೆ ಎಂಬುವುದಾಗಿ ತಿಳಿದು ಬಂದಿತ್ತು.
ಹೀಗಾಗಿ ಅವರನ್ನು ಕೂಡಲೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಿವಾಲ್ವರ್ ಕ್ಲೀನ್ ಮಾಡುವ ವೇಳೆ ಗೋವಿಂದ ಎಡಕಾಲಿಗೆ ಗುಂಡು ತಗುಲಿದ್ದು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ವೀಲ್ಚೇರ್ನಲ್ಲಿಯೇ ಮನೆಗೆ ತೆರಳಿದ ಗೋವಿಂದ ಮೂರ್ನಾಲ್ಕು ವಾರಗಳಲ್ಲಿ ಸಂಪೂರ್ಣ ಗುಣವಾಗುತ್ತಾರೆಂದು ವೈದ್ಯರು ಹೇಳಿದ್ದಾರೆ. ಪತ್ನಿ ಸುನಿತಾ ಜೊತೆ ವೀಲ್ಚೇರ್ನಲ್ಲಿ ಕುಳಿತು ಮಾಧ್ಯಮಕ್ಕೆ ಕೈ ಬೀಸಿ ನಗು ಮುಖದಲ್ಲೇ ಮನೆಗೆ ತೆರಳಿದ್ದಾರೆ.








