ಮುಂಬಯಿ: ಬಾಲಿವುಡ್ (Bollywood) ನಟ ಗೋವಿಂದ (Govinda) ಕಾಲಿಗೆ ಗುಂಡು ಬಿದ್ದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಮ್ಮ ಮನೆಯಲ್ಲಿ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಇಂದು ಬೆಳಗಿನ ಜಾವ ಪರವಾನಗಿ ಪಡೆದ ರಿವಾಲ್ವರ್ ನಿಂದ (Revolver) ಮಿಸ್ ಫೈರ್ ಆಗಿ ಗಾಯಗೊಂಡಿದ್ದಾರೆ ಎಂದು ಮುಂಬೈ ಪೊಲೀಸರು (Mumbai Police) ಹೇಳಿದ್ದಾರೆ.
ಆದರೆ, ನಟ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂದರ್ಭದಲ್ಲಿ ಮನೆಯಲ್ಲಿ ಗೋವಿಂದ ಒಬ್ಬರೇ ಇದ್ದರು. ಶಿವಸೇನೆ ನಾಯಕರಾಗಿರುವ ಗೋವಿಂದ ಇಂದು ಬೆಳಗ್ಗೆ ಕೋಲ್ಕತ್ತಾಗೆ ತೆರಳುವಾಗ ಈ ದುರ್ಘಟನೆ ನಡೆದಿದೆ.
ಈ ಕುರಿತು ಗೋವಿಂದ ಮ್ಯಾನೇಜರ್ ಶಶಿ ಸಿನ್ಹಾ ಮಾತನಾಡಿದ್ದು, ರಿವಾಲ್ವರ್ ನ್ನು ಕೇಸ್ ನಲ್ಲಿ ಇಟ್ಟುಕೊಂಡಿದ್ದರು. ಇಂದು ಕೇಸ್ನಿಂದ ತಗೆಯುವಾಗ ರಿವಾಲ್ವರ್ ಕೆಳಗೆ ಬಿದ್ದಾಗ ಫೈರ್ ಆಗಿ ಬುಲೆಟ್ ಕಾಲಿಗೆ ತಗುಲಿದೆ. ಈಗಾಗಲೇ ವೈದ್ಯರು ಬುಲೆಟ್ ನ್ನು ಹೊರ ತೆಗೆದಿದ್ದಾರೆ ಎನ್ನಲಾಗಿದೆ.