ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಪ್ರಯಾಣದ ಟಿಕೆಟ್ ನೀಡಿದ ವಿವಾದದ ಹಿನ್ನೆಲೆಯಲ್ಲಿ ಬಸ್ ಚಾಲಕಿ ಕೆಲಸ ತೊರೆದಿದ್ದ ಮಹಿಳೆಗೆ ನಟ, ರಾಜಕಾರಣಿ ಕಮಲ್ ಹಾಸನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕೊಯಮತ್ತೂರಿನಲ್ಲಿ ಸಾರಿಗೆ ಬಸ್ ಓಡಿಸಿದ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೆ ಶರ್ಮಿಳಾ ಅವರು ಪಾತ್ರರಾಗಿದ್ದರು.ಅವರು. ಗಾಂಧಿಪುರದಿಂದ ಸೋಮನೂರು ಮಾರ್ಗದಲ್ಲಿ ಖಾಸಗಿ ಬಸ್ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಬೇಸರಗೊಂಡಿದ್ದ ಶರ್ಮಿಳಾ ಕೆಲಸಕ್ಕೆ ರಾಜೀನಾಮೆ ನೀಡದ್ದಳು. ಬಸ್ ಚಾಲಕಿ ಶರ್ಮಿಳಾ ಫ್ಯಾಮಿಲಿಯನ್ನು ನಟ ಕಮಲ್ ಹಾಸನ್ ಮನೆಗೆ ಕರೆಯಿಸಿ ಅವರೊಂದಿಗೆ ಮಾತುಕತೆ ನಡೆಸಿ, ಕಾರನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಕಮಲ್ ಹಾಸನ್ ಪ್ರತಿಕ್ರಿಯಿಸಿ, “ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರ ಕೆಲಸವನ್ನು ಕಳೆದುಕೊಂಡಿರುವುದಕ್ಕೆ ನನಗೆ ತುಂಬಾ ದುಃಖವಾಗಿದೆ. ಅವರು ಕೊಯಮತ್ತೂರಿನಲ್ಲಿ ಪ್ರಥಮ ಖಾಸಗಿ ಬಸ್ ಚಾಲಕಿಯಾಗಿದ್ದಾರೆ. ಯುವಕರಿಗೆ ಸ್ಫೂರ್ತಿ ನೀಡಿದ ಶರ್ಮಿಳಾ ಚಾಲಕಿಯಾಗಿ ಉಳಿಯಬಾರದು. ಆಕೆಗೆ ನಮ್ಮ ಕಮಲ ಸಾಂಸ್ಕೃತಿಕ ಕೇಂದ್ರದಿಂದ ಕಾರು ಕೊಡುತ್ತಿದ್ದೇವೆ. ಕ್ಯಾಬ್ ಸೇವೆಗಳ ಹೊರತಾಗಿ, ಈ ಕಾರನ್ನು ಇತರ ಕೆಲವರಿಗೆ ಉದ್ಯೋಗ ಒದಗಿಸುವ ಉದ್ಯಮಿಯಾಗಿ ಬಳಸಬಹುದು. ಅನೇಕ ಶರ್ಮಿಳಾರನ್ನು ಮಾಡುವುದೇ ನನ್ನ ಉದ್ದೇಶ ಎಂದು ಹೇಳಿದ್ದಾರೆ. ಸದ್ಯ ಕಮಲ್ ಹಾಸನ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.







