ನಟ ಕಮಲ್ ಹಾಸನ್ (Kamal Haasan) ಹಿರಿಯ ಸಹೋದರ ಚಾರು ಹಾಸನ್ (Charu Haasan) ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾರು ಹಾಸನ್ ಅವರ ಹಿರಿಯ ಮಗಳು ಸುಹಾಸಿನಿ (Suhasini) ಅವರು ತಂದೆ ಚಾರು ಹಾಸನ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ಸುಹಾಸಿನಿ ಮಣಿರತ್ನಂ ಸೋಷಿಯಲ್ ಮೀಡಿಯಾದಲ್ಲಿ ತಂದೆಯನ್ನು ತಬ್ಬಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ನೀವು ಇದನ್ನು ನನ್ನ ತಂದೆಗೆ ವೈದ್ಯಕೀಯ ವಾಸ್ತವ್ಯ ಎಂದು ಕರೆಯುತ್ತೀರಾ? ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು, ದಾದಿಯರು ಮತ್ತು ಪುತ್ರಿಯರ ಪ್ರೀತಿ ಮತ್ತು ಕಾಳಜಿಯಿಂದ ಚೇತರಿಸಿಕೊಳ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
91 ವರ್ಷದ ಚಾರು ಹಾಸನ್ ವಯೋಸಹಜ ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ಆರೋಗ್ಯ ಸುಧಾರಿಸುತ್ತಿದೆ ಎನ್ನಲಾಗಿದೆ. ಚಾರು ಹಾಸನ್ ನಟ, ನಿರ್ದೇಶಕ, ನಿವೃತ್ತ ವಕೀಲರಾಗಿದ್ದರು. ಕನ್ನಡ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಅವರು ಕೂಡ ಬಣ್ಣ ಹಚ್ಚಿದ್ದಾರೆ.








