Actor Prabhu : ಬಹುಭಾಷ ಪೋಷಕ ನಟ ಪ್ರಭು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು….
ತಮಿಳಿನ ಹೆಸರಾಂತ ನಟ ಕನ್ನಡ ಮತ್ತು ತೆಲುಗಿನಲ್ಲು ಪೋಷಕ ಪಾತ್ರಗಳಲ್ಲಿ ನಟಿಸಿರುವ ನಟ ಪ್ರಭು ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಸತತ ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಭು ಅವರಿಗೆ ಹಲವು ಭಾಷೆಗಳಲ್ಲಿ ಒಳ್ಳೆಯ ಕ್ರೇಜ್ ಇದೆ. ಆದರೇ ಇತ್ತೀಚೆಗಷ್ಟೇ ನಟ ಆಸ್ಪತ್ರೆಗೆ ದಾಖಲಾಗಿದ್ದಾರಂತೆ.
ಫೆಬ್ರವರಿ 20 ರಂದು ಹೊಟ್ಟೆ ನೋವಿನಿಂದಾಗಿ ಪ್ರಭು ಅವರನ್ನು ಚೆನ್ನೈನ ಮೆಡ್ವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರ ಕಿಡ್ನಿಯಲ್ಲಿ ಕಲ್ಲುಗಳನ್ನ ಪತ್ತೆ ಹಚ್ಚಿದ್ದು, ಲೇಸರ್ ಎಂಡೋಸ್ಕೋಪಿ ಮೂಲಕ ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಪ್ರಭು ಅವರ ಆರೋಗ್ಯ ಸ್ಥಿರವಾಗಿದೆ.
ಶೀಘ್ರವೇ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರ ಆರೋಗ್ಯದ ಬಗ್ಗೆ ತಿಳಿದ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
Actor Prabhu: Multilingual supporting actor Prabhu admitted to hospital due to illness.