ಆಫ್ರಿಕಾದಲ್ಲೂ  ಮುಂದುವರೆದ  ಯಶ್  ಕೆಜಿಎಫ್ ಹವಾ….

1 min read

ಆಫ್ರಿಕಾದಲ್ಲೂ  ಮುಂದುವರೆದ  ಯಶ್  ಕೆಜಿಎಫ್ ಹವಾ….

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಿಂದ  ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಗೊತ್ತೇ ಇದೆ. ಈಗ  ಅವರ ಹವಾ ಭಾರತದಲ್ಲಿ ಮಾತ್ರವಲ್ಲ ಆಫ್ರಿಕಾದಲ್ಲೂ ಮುಂದುವರೆಯುತ್ತಿದೆ.  ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 1 ಸಿನಿಮಾ ಆಫ್ರಿಕಾ ಖಂಡದಲ್ಲೂ  ಸೌಂಡ್ ಮಾಡ್ತಿದೆ.

ಆಫ್ರಿಕಾದ  ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ‘ಕೆಜಿಎಫ್’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಕಿಲಿ ಪಾಲ್ ವಿಡಿಯೋಗಳಿಗೆ ಭಾರತದಲ್ಲಿ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ‘ಕೆಜಿಎಫ್: ಅಧ್ಯಾಯ 1’ ಚಿತ್ರದ ಹಿಂದಿ ಆವೃತ್ತಿಯ ‘ಗಲಿ ಗಲಿ ಮೇ’ ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ಮೌನಿ ರಾಯ್ ಹೆಜ್ಜೆ ಹಾಕಿದ್ದಾರೆ. ಇದೀಗ ಅದೇ ಹಾಡಿಗೆ ಕಿಲಿ ಪೌಲ್ ಡ್ಯಾನ್ಸ್ ಮಾಡಿದ್ದು, ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕಿಲಿ ಪಾಲ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 13 ಲಕ್ಷಕ್ಕೂ ಹೆಚ್ಚು ಜನರು ಅವರನ್ನು ಅನುಸರಿಸುತ್ತಿದ್ದಾರೆ. ಅವರು ಆಗಾಗ್ಗೆ ಭಾರತೀಯ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ಹೂ ‘ಅಂತವಾ ಮಾವ’ ಹಾಡಿಗೆ ಹೆಜ್ಜೆ ಹಾಕಿ ಸಂಚಲನ ಮೂಡಿಸಿದ್ದರು. ಈಗ ಕೆಜಿಎಫ್ ಚಿತ್ರದ ‘ಗಲಿ ಗಲಿ ಮೇ’ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ.

‘ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ’ ಕೆಜಿಎಫ್ ‘ಬ್ಲಾಕ್ ಬಸ್ಟರ್ ಸಿನಿಮಾ. ನಾನು ಈ ಮಾಸ್ಟರ್ ಪೀಸ್ ಅನ್ನು ಇಷ್ಟಪಡುತ್ತೇನೆ, ‘ಕಿಲಿ ಪಾಲ್ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ಆಫ್ರಿಕಾದಲ್ಲಿ ಕೆಜಿಎಫ್ ಚಿತ್ರವನ್ನ ತಿಳಿಸಲು ಪ್ರಯತ್ನಿಸುತ್ತಿದ್ದಾರೆ.  ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  ಕಿಲಿ ಪೌಲ್ ಮಿಂಚುವುದನ್ನ ನೋಡುತ್ತಿದ್ದರೆ ಸದ್ಯದಲ್ಲೇ ಹಾಲಿವುಡ್ ಅಥವಾ ಬಾಲಿವುಡ್ ನಿಂದ ಸಿನಿಮಾ ಆಫರ್ ಬರಲಿದೆ.

‘ಕೆಜಿಎಫ್: ಚಾಪ್ಟರ್ 1’  ಚಿತ್ರದ ದೊಡ್ಡ ಯಶಸ್ಸಿನ ನಂತರ, ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಏ.14ರಂದು ಬಿಡುಗಡೆಯಾಗಲಿದೆ. ಯಶ್ ಅಭಿಮಾನಿಗಳು ಆ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd