ಬೆಂಗಳೂರು, ಜೂನ್ 5: ಸ್ಯಾಂಡಲ್ವುಡ್ ನಟಿ ಅಂಬಿಕಾ ಅವರ ಹೆಸರಿನಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯನ್ನು ತೆರೆದಿದ್ದು, ನಕಲಿ ಖಾತೆ ತೆರೆದಿದ್ದವರಿಗೆ ನಟಿ ಎಚ್ಚರಿಕೆ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಟಿ ಅಂಬಿಕಾ ಯಾವುದೇ ಖಾತೆಯನ್ನು ಹೊಂದಿಲ್ಲ ಮತ್ತು ಇಲ್ಲಿಯವರೆಗೂ ಖಾತೆಯನ್ನು ತೆರೆದಿಲ್ಲ. ಆದರೆ ಅವರ ಹೆಸರಿನಲ್ಲಿ ಸಾಕಷ್ಟು ನಕಲಿ ಖಾತೆಗಳು ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ ಅವರ ಹೆಸರಿನಲ್ಲಿ ನಕಲಿ ಖಾತೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ಬೇಸತ್ತು ಹೋಗಿರುವ ಅಂಬಿಕಾ ತಮ್ಮ ಸ್ನೇಹಿತರ ಖಾತೆಯ ಮುಖಾಂತರ ನಕಲಿ ಖಾತೆ ತೆರೆದಿದ್ದವರಿಗೆ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಅಭಿಮಾನಿಗಳಲ್ಲಿ ಇಂತಹ ವಿಚಾರಕ್ಕೆ ಪ್ರೋತ್ಸಾಹ ನೀಡಬೇಡಿ. ನಕಲಿ ಖಾತೆಗಳಿಂದ ಸಂದೇಶಗಳು ಬಂದರೆ ಸೈಬರ್ ಕ್ರೈಂಗೆ ದೂರು ನೀಡಿ ಎಂದು ಮನವಿ ಮಾಡಿದ್ದಾರೆ.
ಸೆಲೆಬ್ರಿಟಿಗಳ ಖಾತೆಗಳನ್ನು ಸಾಮಾಜಿಕ ಜಾಲತಾಣದಲ್ಲಿ
ಅವರ ಹೆಸರಿನ ಮುಂದೆ ನೀಲಿ ಬಣ್ಣದ ಟಿಕ್ಮಾರ್ಕ್ ಮಾಡಿ ವೆರಿಫೈಡ್ ಮಾಡಲಾಗುತ್ತದೆ. ಆದ್ದರಿಂದ ಅಭಿಮಾನಿಗಳು ಎಚ್ಚರಿಕೆಯಿಂದ ಇರುವಂತೆ ನಟಿ ಅಂಬಿಕಾ ಮನವಿ ಮಾಡಿದ್ದಾರೆ








