ಇಂದೋರ್, ಮೇ 26 : ಟಿವಿ ನಟಿ ಪ್ರೇಕ್ಷಾ ಮೆಹ್ತಾ ನೇಣು ಬಿಗಿದು ಕೊಂಡು ಸಾವಿಗೆ ಶರಣಾಗಿದ್ದಾಳೆ. ಮಧ್ಯಪ್ರದೇಶದ ಇಂದೋರ್ ನಲ್ಲಿ, ಟಿವಿ ನಟಿಯಾಗಿರುವ ಪ್ರೇಕ್ಷಾ ಮೆಹ್ತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರೇಕ್ಷಾಗೆ ಹೊಸ ಅವಕಾಶಗಳು ಸಿಕ್ಕಿರಲಿಲ್ಲ. ಇದರಿಂದ ಮನನೊಂದ ನಟಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
ಮುಂಬೈಯ ಅನೇಕ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದ ಪ್ರೇಕ್ಷಾ, ಕ್ರೈಮ್ ಪೆಟ್ರೋಲ್ ಧಾರಾವಾಹಿಯ ಹಲವಾರು ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದಳು. ಲಾಕ್ ಡೌನ್ ಹಿನ್ನೆಲೆಯಲ್ಲಿ ತನ್ನ ಊರು ಇಂದೋರ್ ನ ಭಜರಂಗ್ ನಗರಕ್ಕೆ ಬಂದಿದ್ದ ನಟಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಂಗಭೂಮಿಯಲ್ಲೂ ನಟಿಸಿರುವ ಈಕೆ ಕೆಲವು ನಾಟಕಗಳಲ್ಲೂ ನಟಿಸಿದ್ದಳು. ರಾಷ್ಟ್ರೀಯ ನಾಟಕ ಉತ್ಸವದಲ್ಲಿ ಪಾಲ್ಗೊಂಡಿದ್ದ ನಟಿಗೆ ಪ್ರಶಸ್ತಿ ಕೂಡ ಒಲಿದು ಬಂದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಸಮಯದ ಮೊದಲು ಪ್ರೇಕ್ಷಾ ವಾಟ್ಸ್ ಆಪ್ ನಲ್ಲಿ, ಕನಸುಗಳನ್ನು ಸಾಯಿಸುವುದು ತುಂಬಾ ಕೆಟ್ಟದ್ದು ಎನ್ನುವ ಅರ್ಥ ಬರುವ ಸ್ಟೇಟಸ್ ಹಾಕಿಕೊಂಡಿದ್ದಳು.








