3ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಿಯಾಂಕಾ – ನಿಕ್ ದಂಪತಿ..!

1 min read

3ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಿಯಾಂಕಾ – ನಿಕ್ ದಂಪತಿ..!

ಮುಂಬೈ: ಇತ್ತೀಚೆಗಷ್ಟೇ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂದು ಸುದ್ದಿಯಲ್ಲಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ, ಅಮೆರಿಕನ್ ಪಾಪ್ ಸಿಂಗರ್ ನಿಕ್ ಜೋನಸ್ ಇದೀಗ ತಮ್ಮ 3ನೇ ವಿವಾಹ ವಾರ್ಷಿಕೋತ್ಸವವನ್ನ ಗ್ರ್ಯಾಂಡ್ ಆಗಿಯೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ..

ಪ್ರಿಯಾಂಕಾ ಹಾಗೂ ನಿಕ್ ಡಿಸೆಂಬರ್ 1 ರಂದು ಲಂಡನ್ನಲ್ಲಿ ಮದುವೆ ವಾರ್ಷಿಕೋತ್ಸವನ್ನು ಸಖತ್ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಇನ್ನೂ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೆಶನ್ ವೀಡಿಯೋವನ್ನು ನಿಕ್ ಜೋನಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಫಾರ್ ಎವರ್ ಎಂದು ಬರೆದುಕೊಂಡಿದ್ದಾರೆ..

ವೀಡಿಯೋದಲ್ಲಿ ಫಾರ್ ಎವರ್ ಜೋಡಿಸಿರುವ ಅಕ್ಷರ, ಕ್ಯಾಡಲ್ ಲೈಟ್ಗಳನ್ನು ಹಾಗೂ ಡೇಬಲ್ ಮೇಲೆ ಬಣ್ಣ, ಬಣ್ಣದ ಹೂವಿಗಳಿಂದ ಅಲಂಕರಿಸಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋದಲ್ಲಿ ಟೇಬಲ್ ಮೇಲೆ ಕುಳಿತು ಪ್ರಿಯಾಂಕಾ ಚೋಪ್ರಾ ಹಾಯ್ ಮಾಡುತ್ತಾ ಕ್ಯೂಟ್ ಫುಲ್ ಎಕ್ಸೈಟ್ ಆಗಿ ಕಾಣಿಸಿಕೊಂಡಿದ್ದಾರೆ..

ಪ್ರಿಯಾಂಕಾ ಚೋಪ್ರಾ ಕೂಡ ಸೆಲೆಬ್ರೆಶನ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.. ಫೋಟೋದಲ್ಲಿ ಟೇಬಲ್ ಒಂದರ ಕಾರ್ಡ್ ಮೇಲೆ ‘ನಿಮ್ಮನ್ನು ಕಂಡುಕೊಂಡೆ, ಮದುವೆಯಾದೆ, ನಿಮ್ಮನ್ನು ಉಳಿಸಿಕೊಂಡೆ’ ಎಂಬ ಬರಹ ಗಮನ ಸೆಳೆಯುತ್ತಿದೆ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd