ಚಂದನವನದ ನಟಿ ರಾಧಿಕಾ ಪಂಡಿತ್ (Radhika Pandit) ತಮ್ಮ ಮಕ್ಕಳಿಗೆ ಪರಿಸರದ ಪಾಠ ಮಾಡಿದ್ದಾರೆ.
ಮಕ್ಕಳ ಜೊತೆ ವೆಕೇಷನ್ ನಲ್ಲಿ ಮೂಡ್ ನಲ್ಲಿರುವ ರಾಧಿಕಾ ಪರಿಸರದ ಸುಂದರ ಕ್ಷಣ ಅನುಭವಿಸುವ ಪರಿ ತಿಳಿಸಿಕೊಟ್ಟಿದ್ದಾರೆ. ಸದ್ಯ ಪ್ರವಾಸದ ಸುಂದರ ಕ್ಷಣಗಳ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬದ ಜೊತೆ ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟು ರಾಧಿಕಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆದರೆ, ಚಿತ್ರದಲ್ಲಿ ಮಾತ್ರ ಯಶ್ ಕಾಣಿಸಿಕೊಂಡಿಲ್ಲ. ಈ ಫೋಟೋ ನೋಡಿ ಯಶ್ ಎಲ್ಲಿ ಎಂದು ನಟಿಗೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಅಂಬಾನಿ ಮನೆ ಮಗನ ಮದುವೆಗೆ ಯಶ್ (Yash) ದಂಪತಿ ಹಾಜರಿ ಹಾಕಿದ್ದರು. ಈ ವೇಳೆ, ಯಶ್ ಹೊಸ ಲುಕ್ ಭಾರೀ ವೈರಲ್ ಆಗಿತ್ತು. ರಾಧಿಕಾ ಪಂಡಿತ್, ಸೀರೆಯುಟ್ಟು ಸಿಂಪಲ್ ಆಗಿ ಭಾಗಿಯಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿತ್ತು.
ಮದುವೆಯಾದ ನಂತರ ರಾಧಿಕಾ ಕೂಡ ಮತ್ತೆ ಬಣ್ಣ ಹಚ್ಚಿದ್ದಾರೆ. ‘ಆದಿ ಲಕ್ಷ್ಮಿ ಪುರಾಣ’ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಹೀಗಾಗಿ ಮತ್ತೊಮ್ಮೆ ಬಣ್ಣ ಹಚ್ಚುವುದು ಯಾವಾಗ ಎಂದು ನಟಿಗೆ ಕೇಳುತ್ತಿದ್ದಾರೆ. ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದು ನಟಿ ಹೇಳಿದ್ದಾರೆ. ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟಿ ಯಾವಾಗ ಬಣ್ಣ ಹಚ್ಚುತ್ತಾರೆ ಎಂಬುವುದನ್ನು ಕಾಯ್ದು ನೋಡುತ್ತಿದ್ದಾರೆ.








