ಬೇಲ್ ಸಿಕ್ಕರೂ ಜೈಲಿನಿಂದ ಹೊರಬರಲಾಗದೇ ‘ರಾಗಿಣಿ’ ಪರದಾಟ..!
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದ ನಟಿ ರಾಗಿಣಿಗೆ ಈಗಾಗಲೇ ಜಾಮೀನು ಮಂಜೂರಾಗಿದ್ರೂ ಸಹ ಇನ್ನೂವರೆಗೂ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ. ಆಪ್ತರು ಯಾರೂ ಕೂಡ ಶ್ಯೂರಿಟಿ ಹಾಕಲು ಮುಂದೆ ಬಾರದ ಹಿನ್ನೆಲೆ ತುಪ್ಪದ ಬೆಡಗಿ 2 ದಿನಗಳಿಂದಲೂ ಜೈಲಲ್ಲೇ ವಾಸಿಸುವಂತಾಗಿದೆ.
AAP ಶಾಸಕ ಸೋಮನಾಥ ಭಾರ್ತಿಗೆ 2 ವರ್ಷ ಜೈಲು ಶಿಕ್ಷೆ ಖಾಯಂ..!
ಜನವರಿ 21ರಂದು ನಟಿ ರಾಗಿಣಿ ದ್ವಿವೇದಿಗೆ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಆದ್ರೆ ಸುಪ್ರೀಂ ಕೋರ್ಟ್ ಆದೇಶ ಪ್ರತಿ ಎನ್ ಡಿ ಪಿ ಎಸ್ ನ್ಯಾಯಾಲಯಕ್ಕೆ ಮೊನ್ನೆ ತಡವಾಗಿ ಸಿಕ್ಕ ಕಾರಣ ಜೈಲಿನಿಂದ ನಟಿ ರಾಗಿಣಿ ಬಿಡುಗಡೆ ಆಗಿರಲಿಲ್ಲ. ಇಂದು ವಕೀಲರು ಕೋರ್ಟ್ ಗೆ ಆದೇಶ ಪ್ರತಿ ಸಲ್ಲಿಸಿದ್ದರೂ, ಜಾಮೀನಿನ ವೇಳೆ ಶ್ಯೂರಿಟಿ ಕೊಡಲು ಯಾರು ಮುಂದೆ ಬಾರದ ಕಾರಣ ರಿಲೀಸ್ ಗೆ ತಡವಾಗುತ್ತಿದೆ ಎನ್ನಲಾಗಿದೆ.
ದೇಶದ ಅತ್ಯುತ್ತಮ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ : ಸಮೀಕ್ಷೆ ಏನ್ ಹೇಳತ್ತೆ..!
ಜೈಲಿನಿಂದ ನಟಿ ರಾಗಿಣಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಶ್ಯೂರಿಟಿ ಅಗತ್ಯವಿದೆ. ಆದ್ರೆ ಶ್ಯೂರಿಟಿ ನೀಡೋದಕ್ಕೆ ರಾಗಿಣಿ ಆಪ್ತರಾರು ಮುಂದೆ ಬರ್ತಾ ಇಲ್ಲ ಎನ್ನಲಾಗಿದೆ. ಈ ಮೊದಲು ಇಬ್ಬರು ಮುಂದೆ ಬಿಂದಿದ್ದರೂ, ಅಂತಿಮ ಕ್ಷಣದಲ್ಲಿ ಹಿಂದೆ ಸರಿದ ಕಾರಣ, ವಕೀಲರು ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶ ಪ್ರತಿ ತಲುಪಿಸಿದ್ರೂ, ಶ್ಯೂರಿಟಿ ನೀಡದ ಕಾರಣ, ಸೋಮವಾರ ರಿಲೀಸ್ ಆಗಲಿದ್ದಾರೆ ಎನ್ನಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel