ವಿವಾದದಿಂದಲೇ ಸಾಕಷ್ಟು ಸದ್ದು ಮಾಡುವ ನಟಿಗಳಲ್ಲಿ ನಟಿ ರಾಖಿ ಸಾವಂತ್ (Rakhi Sawant) ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.
ಇತ್ತೀಚೆಗಷ್ಟೇ ಪತಿ ಆದಿಲ್ ಖಾನ್ ದುರಾನಿ ಅವರೊಂದಿಗೆ ಗಲಾಟೆ ಮಾಡಿಕೊಂಡು ಇತ್ತೀಚೆಗಷ್ಟೇ ಸುದ್ದಿಯಲ್ಲಿದ್ದರು. ಸದ್ಯ ಹೆಸರು ಬದಲಾಯಿಸಿಕೊಂಡು ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಇಸ್ಲಾಂನ ಪವಿತ್ರ ಸ್ಥಳ ಮೆಕ್ಕಾಗೆ ರಾಖಿ ಭೇಟಿಯಾಗಿದ್ದರು. ಈ ವೇಳೆ ರಾಖಿ ಸಾವಂತ್ ಬಿಳಿ ಬಣ್ಣದ ಬುರ್ಕಾ ಧರಿಸಿದ್ದು, ಅವರನ್ನು ಮುಂಬೈನಲ್ಲಿ ಫ್ಯಾನ್ಸ್ ಸ್ವಾಗತಿಸಿದ್ದಾರೆ.
ಈ ವೇಳೆ ಮಾತನಾಡಿದ ರಾಖಿ,ನನ್ನನ್ನು ರಾಖಿ ಎಂದು ಕರೆಯುವ ಬದಲು ಫಾತಿಮಾ ಎಂದು ಕರೆಯಬೇಕು ಎಂದು ಹೇಳಿದ್ದಾರೆ. ಆದರೆ, ದಾಖಲೆಗಳಲ್ಲಿ ಮಾತ್ರ ಯಾವುದೇ ಹೆಸರು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ. ರಾಖಿ ಅವರು ಡಾನ್ಸರ್, ಮಾಡೆಲ್, ನಟಿಯಾಗಿ ಅವರು ಕನ್ನಡ, ಮರಾಠಿ, ಒಡಿಯಾ, ತೆಲುಗು, ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ.