`ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದಾನಿ, ರಿಲಯನ್ಸ್ ಎಂಡ್..!
ಅಹ್ಮದಾಬಾದ್ : ಸರ್ದಾರ್ ಪಟೇಲ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಹೆಸರು ಮರುನಾಮಕರಣ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಇದರ ಬೆನ್ನಲ್ಲೆ ಸ್ಟೇಡಿಯಂನಲ್ಲಿ ಅದಾನಿ, ರಿಲಯನ್ಸ್ ಎಂಡ್ ಇರುವುದು ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಅದರಲ್ಲೂ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಅನ್ನೋ ಹೆಸರಿಟ್ಟು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಅವಮಾನಿಸಿಲಾಗಿದೆ ಎಂದು ನೆಟ್ಟಜನ್ ಗಳು ಆರೋಪಿಸುತ್ತಿದ್ದಾರೆ.
ಈ ಮಧ್ಯೆ ಸ್ಟೇಡಿಯಂನ ತುದಿಗಳಿಗೆ ಅದಾನಿ, ರಿಲಯನ್ಸ್ ಹೆಸರಿಡಲು ಕಾರಣವೇನು ಅನ್ನೋ ಬಗ್ಗೆ ಮಾಧ್ಯಮಗಳು ವರದಿ ಪ್ರಕಟಿಸಿದ್ದು, ಮೂಲಗಳ ಪ್ರಕಾರ ನರೇಂದ್ರ ಮೋದಿ ಸ್ಟೇಡಿಯಂ ನಿರ್ಮಾಣಕ್ಕೆ ಅದಾನಿ ಹಾಗೂ ರಿಲಯನ್ಸ್ ಕಂಪನಿಗಳು ಹೆಚ್ಚು ದೇಣಿಗೆ ನೀಡಿವೆಯಂತೆ.
ಇದಲ್ಲದೇ ಈ ಎರಡೂ ಕಂಪನಿಗಳು ದೇಣಿಗೆ ಜೊತಗೆ 25 ವರ್ಷಗಳ ಅವಧಿಗೆ ಜಿಎಸ್ ಟಿ ಸೇರಿ 250 ಕೋಟಿ ರೂಪಾಯಿಗೆ ಸ್ಟೇಡಿಯಂನ ತಲಾ ಒಂದು ಕಾರ್ಪೋರೇಡ್ ಬಾಕ್ಸ್ ಖರೀದಿಸಿವೆಯಂತೆ. ಇದೇ ಕಾರಣಕ್ಕಾಗಿ ಎಂಡ್ ಗಳಿಗೆ ಅದಾನಿ ಹಾಗೂ ರಿಲಯನ್ಸ್ ಹೆಸರನ್ನು ಇಡಲಾಗಿದೆ ಅಂತ ಹೇಳಲಾಗುತ್ತಿದೆ.
ಇನ್ನು ಈಗ ರಿಲಯನ್ಸ್ ಎಂಡ್ ಇರುವ ಕಡೆ ಈ ಹಿಂದೆ ಸರ್ಕಾರಿ ಸ್ವಾಮ್ಯದ ಜಿಡಿಎಂಸಿ ಹೆಸರಿತ್ತು. ಪೂರ್ವ ಮತ್ತು ಪಶ್ಚಿಮ ಸ್ಟ್ಯಾಂಡ್ ಗಳನ್ನು ಮಾರಾಟ ಮಾಡಲು ಕಾರ್ಪೋರೇಟ್ ಕಂಪನಿಗಳು ಒಳಗೊಳ್ಳುವಂತೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದ್ದು, ಮೋದಿ ಕ್ರೀಡಾಂಗಣದಲ್ಲಿ ಒಟ್ಟು 76 ಕಾರ್ಪೋರೇಟ್ ಬಾಕ್ಸ್ ಗಳಿವೆ.
