Adipurush – ಟೀಸರ್ ಬಿಡುಗಡೆ ಬಳಿಕ ರಾಮಲಲ್ಲ ದರ್ಶನ ಪಡೆದ ಪ್ರಭಾಸ್ …
ಗ್ಲೋಬಲ್ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ‘ಆದಿ ಪುರುಷ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿನ್ನೆ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ.
ಟೀಸರ್ ಕಾರ್ಯಕ್ರಮದ ಬಳಿಕ ಆದಿಪುರುಷ ಚಿತ್ರ ತಂಡ ಅಯೋಧ್ಯೆಯಲ್ಲಿರುವ ರಾಮಲಲ್ಲಾ ದೇವಸ್ಥಾನಕ್ಕೆ ಬೇಟಿ ನೀಡಿತು. ರಾಮಲಲ್ಲಾರ ದರ್ಶನ ಪಡೆದ ಚಿತ್ರತಂಡಕ್ಕೆ ರಾಮಜನ್ಮಭೂಮಿಯ ಅರ್ಚಕರು ಪ್ರಸಾದ ವಿತರಿಸಿದರು. ಈ ವೇಳೆ ವಿಭಾಗೀಯ ಆಯುಕ್ತ ಅಯೋಧ್ಯ ಮಂಡಲ್ ನವದೀಪ್ ರಿನ್ವಾ ಉಪಸ್ಥಿತರಿದ್ದರು.
ಐದು ಭಾಷೆಗಳಲ್ಲಿ ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮುಂದಿನ ವರ್ಷ ಅಂದರೆ 2023ರ ಸಂಕ್ರಾತಿ ಹಬ್ಬದಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ತಯಾರಾಗುತ್ತಿದೆ.
ಈ ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ಲಂಕೇಶ್ ಆಗಿ ಸೈಫ್ ಅಲಿ ಖಾನ್ ಮತ್ತು ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸುತ್ತಿದ್ದಾರೆ. ಐಮ್ಯಾಕ್ಸ್ 3ಡಿಯಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.
Adipurush Teaser Launch Prabhas Kriti Sanon Om Raut Visit Ram Mandir Ayodhya And Seek