ಟೀಸರ್ ಬಿಡುಗಡೆಯಾಯಿತು ಪ್ರೇಕ್ಷಕರ ಕನಸು ಹುಸಿಯಾಯಿತು…
ಗ್ಲೋಬಲ್ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ‘ಆದಿ ಪುರುಷ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿನ್ನೆ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಲಾಯಿತು.
ಚಿತ್ರದ ಟೀಸರ್ ಏನೋ ಬಿಡುಗಡೆಯಾಯಿತು, ಆದರೆ ಅಭಿಮಾನಿಗಳ ಕನಸು ಮಾತ್ರ ಹುಸಿಯಾಯಿತು , ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾದ ನಂತರ ಪ್ರಭಾಸ್ ಅಭಿಮಾನಿಗಳು ಆದಿಪುರಷ ಚಿತ್ರದ ಮೇಲೆ ಭಾರಿ ನೀರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪ್ರೇಕ್ಷರ ನಿರೀಕ್ಷೆಯನ್ನ ಮುಟ್ಟುವಲ್ಲಿ ಟೀಸರ್ ವಿಫಲವಾಗಿದೆ.
ಪ್ರಭಾಸ್ ನಂತಹ ಪ್ಯಾನ್ ಇಂಡಿಯಾ ಸ್ಟಾರ್ ಇಟ್ಟುಕೊಂಡು 500 ಕೋಟಿ ಬಂಡವಾಳದಲ್ಲಿ ತಯಾರುಗುತ್ತಿರುವ ಆದಿಪುರಷ ಚಿತ್ರದ ಟೀಸರ್ ಯಾವ ಹಂತದಲ್ಲೂ ಪ್ರೇಕ್ಷಕರ ಮನಗೆಲ್ಲಲಿಲ್ಲ. ಈ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗಳೇ ಕೇಳಿ ಬರುತ್ತಿವೆ.
ಇದು ಟೀಸರ್ ಮೇಲೆ ಪ್ರೇಕ್ಷಕರ ಅಭಿಪ್ರಾಯವಷ್ಟೆ ಇನ್ನೂ ಸಿನಿಮಾ ಹೇಗಿದೆ ಎನ್ನನುವು ಸಿನಿಮಾ ನೋಡಿದ ನಂತರ ತಿಳಿಯದೆ. ಓಂ ರಾವುತ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದು. ಚಿತ್ರವು ಮುಂದಿನ ವರ್ಷ ಜನವರಿ 12 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ಲಂಕೇಶ್ ಆಗಿ ಸೈಫ್ ಅಲಿ ಖಾನ್ ಮತ್ತು ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸುತ್ತಿದ್ದಾರೆ. ರೂ. 500 ಕೋಟಿ ಬಜೆಟ್ನಲ್ಲಿ ಸಿನಿಮಾ ನಿರ್ಮಿಸಲಾಗಿದೆ. ಐಮ್ಯಾಕ್ಸ್ 3ಡಿಯಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.
Adipurush Teaser: Netizens Troll ‘Bad’ VFX of Prabhas Starrer, Joke Saif Ali Khan