ಅಫ್ಘಾನಿಸ್ತಾನವನ್ನು ಉಗ್ರರ ತಾಣವಾಗಲು ಬಿಡಲ್ಲ, ಅಲ್ಲಿನ ಜನರ ಜೊತೆ ನಾವಿದ್ದೇವೆ : ಬೈಡೆನ್
ಅಮೆರಿಕಾ : ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ನಿರ್ಧಾರದಿಂದಲೇ ಅಫ್ಗಾನ್ ಇಂದು ಈ ಪರಿಸ್ಥಿತಿಗೆ ಬಂದಿದೆ ಅನ್ನೋದು ಅನೇಕರ ಅಭಿಪ್ರಾಯ.. ಅಫ್ಗಾನ್ ನಿಂದ ತನ್ನ ಸೇನೆ ಹಿಂತೆಗೆದುಕೊಂಡ ಬಳಿಕವೇ ತಾಲಿಬಾನಿಗಳು ಪಾಪಿ ಪಾಕಿಸ್ತಾನದ ಸಹಾಯದಿಂದ ಅಫ್ಗಾನ್ ನ ವಶಕ್ಕೆ ಪಡೆದು ನರಕ ಮಾಡಿದ್ದಾರೆ.
ಆದ್ರೆ ಇದೀಗ ಈ ಬಗ್ಗೆ ಮಾತನಾಡಿರೋ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಜಿ-7 ರಾಷ್ಟ್ರಗಳು ಈ ಬಗ್ಗೆ ಒಂದೇ ನಿಲುವನ್ನು ಹೊಂದಿವೆ. ಒಂದು ವೇಳೆ ಆಫ್ಘಾನ್ನಲ್ಲಿ ಶಸ್ತ್ರಧಾರಿಗಳು ಸರ್ಕಾರ ರಚನೆ ಮಾಡಿ ಆ ರಾಷ್ಟ್ರವನ್ನು ಭಯೋತ್ಪಾದಕರ ಮೂಲತಾಣವನ್ನಾಗಿಸಿಕೊಳ್ಳಲು ಮುಂದಾದರೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಜಿ-7 ಬ್ಲಾಕ್, ವಿಶ್ವಸಂಸ್ಥೆ, ನ್ಯಾಟೋ ಮತ್ತು ಯೂರೋಪಿಯನ್ ಒಕ್ಕೂಟದ ಮುಖಂಡರೊಂದಿಗೆ ವರ್ಚುಯಲ್ ಸಭೆ ನಡೆಸಿದ ನಂತರ ಮಾತನಾಡಿದ ಬೈಡೆನ್ ಅವರು ತಾಲಿಬಾನಿಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ನಾವೆಲ್ಲಾ ನಿಮ್ಮ ಜೊತೆಗಿರುತ್ತೇವೆ ಎಂದು ಯುರೋಪಿಯನ್ ಒಕ್ಕೂಟ, ನ್ಯಾಟೋ, ವಿಶ್ವಸಂಸ್ಥೆಗಳು ಭರವಸೆ ನೀಡಿವೆ. ಆಫ್ಘಾನ್ನಲ್ಲಿ ಮುಂದೆ ರಚನೆಯಾಗುವ ಸರ್ಕಾರ ತಾಲಿಬಾನಿಗಳ ತಾಳಕ್ಕೆ ಕುಣಿಯಲು ಆರಂಭಿಸಿದರೆ ಅಂತಹ ಸರ್ಕಾರದ ವಿರುದ್ಧ ನಾವು ಒಗ್ಗೂಡಿ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ.