ಅಫ್ಘಾನ್ ನಲ್ಲಿನ ವಿದ್ಯಮಾನಗಳ ಮೇಲೆ ಭಾರತ – ಅಮೆರಿಕಾದ ಹದ್ದಿನ ಕಣ್ಣು
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಇನ್ನೂ ಈ ಬೆಳವಣಿಗೆಗಳ ಮೇಲೆ ಭಾರತ ಅಮೆರಿಕಾ ಹದ್ದಿನ ಕಣ್ಣಿಟ್ಟಿದೆ. ಈ ವಿದ್ಯಮಾನಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಹಾಗೂ ಅಮೆರಿಕಾ ಪರಸ್ಪರ ಕೈ ಜೋಡಿಸುವ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕಾ ಸ್ಟೇಟ್ ಸೆಕ್ರೆಟರಿ ಅಂಟೋನಿ ಬ್ಲಿಂಕನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ..
ಅಫ್ಘಾನಿಸ್ತಾನ ಬಿಕ್ಕಟ್ಟು: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದ್ದೇನು..?
ಕಳೆದ ಮಂಗಳವಾರ ಭಾರತ ಕಾಬೂಲ್‍ನಲ್ಲಿ ತನ್ನ ದೇಶದ ರಾಯಭಾರಿ ಕಚೇರಿಗಳ ಸಿಬ್ಬಂದಿಗಳನ್ನು ಮಿಲಿಟರಿ ವಿಮಾನದಲ್ಲಿ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿತ್ತು. ನಿನ್ನೆಯಷ್ಟೆ ಜೈಶಂಕರ್ ಅವರಿಗೆ ದೂರವಾಣಿ ಕರೆ ಮಾಡಿ ಆಫ್ಘಾನ್ ಪರಿಸ್ಥಿತಿ ಕುರಿತಂತೆ ಚರ್ಚಿಸಿದ್ದ ಬ್ಲಿಂಕನ್ ಅವರು ಇಂದು ಕೂಡಾ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನದ ಮೂಲಗಳಿಂದ ತಿಳಿದುಬಂದಿದೆ.








