‘ಸ್ಮಶಾಣ’ ಬಿಟ್ಟು ಹೋಗದಂತೆ ಜನರಿಗೆ ‘ನರರಾಕ್ಷಸ’ರ ಎಚ್ಚರಿಕೆ..!
ಅಫ್ಗಾನಿಸ್ತಾನ : ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಇದೀಗ ಈ ನರಕದಿಂದ ಜನ ಹೇಗಾದ್ರೂ ಪಾರಾಗಲೇ ಬೇಕು ಅನ್ನೋ ತವಕದಲ್ಲಿದಲ್ಲಿದ್ದಾರೆ.. ನರರಾಕ್ಷಸರಿಂದ ತಪ್ಪಿಸಿಕೊಂಡ್ರೆ ಸಾಕು ಅಂತ ದೇಶ ಬಿಡ್ತಾಯಿದ್ದಾರೆ.. ಸೆಲೆಬ್ರಿಟಿಗಳು ಜನಪ್ರತಿನಿಧಿಗಳು ಈಗಾಗಲೇ ದೇಶ ಬಿಟ್ಟು ಬೇರೆ ಬೇರೆ ದೇಶಗಳಿಗೆ ಓಡಿಹೋಗಿದ್ದಾರೆ.. ದೇಶದ ಅಧ್ಯಕ್ಷ ಅಶ್ರಫ್ ಘನಿ ಜನರನ್ನ ಸಂಕಷ್ಟದ ಸಮಯದಲ್ಲಿ ಬಿಟ್ಟು ಪಲಾಯನ ಮಾಡಿದ್ದಾನೆ..
ಆದ್ರೆ ಇದೀಗ ಅಫ್ಘಾನ್ ನಾಗರಿಕರು ದೇಶ ಬಿಟ್ಟು ತೆರಳದಂತೆ ತಾಲಿಬಾನ್ ಉಗ್ರರು ಎಚ್ಚರಿಸಿದ್ದಾರೆ. ಈನಿಟ್ಟಿನಲ್ಲಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗದಂತೆ ತಡೆಯೊಡ್ಡುತ್ತಿದ್ದಾರೆ.
ಅಫ್ಘಾನಿಸ್ತಾನವನ್ನು ಉಗ್ರರ ತಾಣವಾಗಲು ಬಿಡಲ್ಲ, ಅಲ್ಲಿನ ಜನರ ಜೊತೆ ನಾವಿದ್ದೇವೆ : ಬೈಡೆನ್
ಕಾಬೂಲ್ ವಿಮಾನ ನಿಲ್ದಾಣದಿಂದ ವಿದೇಶಿ ಪ್ರಜೆಗಳು ತೆರಳಬಹುದಾಗಿದೆ ಎಂದು ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಜಬೀವುಲ್ಲಾ ಮಜಾಹಿದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಅಫ್ಘಾನಿಸ್ತಾನ್ ಪ್ರಜೆಗಳು ದೇಶ ಬಿಟ್ಟು ತೆರಳದಂತೆ ತಡೆಯೊಡ್ಡಲು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದರೆ ವಿದೇಶಿ ಪ್ರಜೆಗಳು ಈ ರಸ್ತೆಯಲ್ಲಿ ತೆರಳಬಹುದಾಗಿದೆ.
ಅಫ್ಘಾನ್ ನಾಗರಿಕರಿಗೆ ತಾಲಿಬಾನ್ ನಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ಜಬೀವುಲ್ಲಾ ತಿಳಿಸಿದ್ದು, ಯಾವುದೇ ಕಾರಣಕ್ಕೂ ವೈದ್ಯರು, ಉನ್ನತ ವ್ಯಾಸಂಗ ಮಾಡುವವರು ದೇಶ ಬಿಟ್ಟು ತೆರಳದಂತೆ ಎಚ್ಚರಿಕೆ ನೀಡಿದೆ.
ಸೈಕಲ್ ನಲ್ಲಿ ಪಿಜ್ಜಾ ಡಿಲೆವರಿ ಮಾಡ್ತಿದ್ದಾರೆ… ಅಫ್ಗಾನ್ ನ ಮಾಜಿ ಸಚಿವರು..!
ಈಗಾಗಲೇ ಅಮೆರಿಕ ಘೋಷಿಸಿರುವಂತೆ ಅಗಸ್ಟ್ 31ರೊಳಗೆ ಕಾಬೂಲ್ ವಿಮಾನ ನಿಲ್ದಾಣದಿಂದ ಜನರನ್ನು ಏರ್ಲಿಫ್ಟ್ ಮಾಡಬೇಕು. ಅಲ್ಲದೇ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಅಷ್ಟೇ ಅಲ್ಲದೆ ಅಂತಿಮ ಗಡುವನ್ನು ವಿಸ್ತರಿಸುವುದಿಲ್ಲ ಎಂದು ತಾಲಿಬಾನ್ ತಿಳಿಸಿದೆ.
ಅಗಸ್ಟ್ 31ರ ಬಳಿಕ ಜನರ ಸ್ಥಳಾಂತರಕ್ಕೆ ನಾವು ಅವಕಾಶ ನೀಡುವುದಿಲ್ಲ. ವೈದ್ಯರು, ತಂತ್ರಜ್ಞರು ದೇಶದಲ್ಲಿಯೇ ಇದ್ದು ತಮ್ಮ ಕೆಲಸವನ್ನು ಮುಂದುವರಿಸಬೇಕು ಎಂದು ತಾಲಿಬಾನ್ ತಿಳಿಸಿದೆ.








