ಪತಿ, ಮಕ್ಕಳ ಎದುರೇ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯನ್ನ ಬರ್ಬರವಾಗಿ ಕೊಂದ ತಾಲಿಬಾನ್ ರಾಕ್ಷಸರು
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನರರಾಕ್ಷಸರಿಂದಾಗಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ಮಹಿಳೆಯರೇ.. ನಾವು ಬದಲಾಗಿದ್ದೇವೆ, ಮಹಿಳೆಯರ ಹಕ್ಕನ್ನ ಗೌರವಿಸುತ್ತೇವೆ ಎಂದು ಹೇಳಿಕೊಂಡಿದ್ದ ತಾಲಿಬಾನಿಗಳು ಒಂದೊಂದಾಗೇ ಮಹಿಳೆಯರ ಹಕ್ಕನ್ನ ಕಸಿಯುತ್ತಿದ್ದಾರೆ.. ಮೊದಲಿಗೆ ಸರ್ಕಾರಿ ಮಾಧ್ಯಮಗಳಲ್ಲಿ ಮಹಿಳೆಯರನ್ನ ಕೆಸಲದಿಂದ ಕಿತ್ತೊಗೆದ ಬಗ್ಗೆ ಸುದ್ದಿಯಾಯ್ತು. ನಂತರ ಕಂದಹಾರ್ ಪ್ರಾಂತ್ಯದಲ್ಲಿ ಸುದ್ದಿ ವಾಹಿನಿಗಳು , ಸಂಗೀತವಿರಲಿ ಯಾವುದ್ರಲ್ಲೂ ಮಹಿಳೆಯರ ಧ್ವನಿ ಕೇಳಬಾರದೆಂದು ಆದೇಶ ನೀಡಿದ್ರು..
ಆದ್ರೆ ಇನ್ನೂ ಘೋರ ಅಂದ್ರೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಆಕೆಯ ಪತಿ ಹಾಗೂ ಮಕ್ಕಳ ಎದುರೇ ನರರೂಪಿ ತಾಲಿಬಾನ್ ರಾಕ್ಷಸರು ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಘಟನೆ ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದ ಕೇಂದ್ರ ನಗರದ ಫಿರೋಜ್ಕೋಹ್ ನಲ್ಲಿ ನಡೆದಿದೆ. ಮೃತ ಮಹಿಳಾ ಅಧಿಕಾರಿಯನ್ನು ಬಾನು ನೆಗರ್ ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 8 ತಿಂಗಳ ಗರ್ಭಿಣಿಯಾಗಿದ್ದರು. ಮಹಿಳಾ ಅಧಿಕಾರಿಯನ್ನು ತಾಲಿಬಾನಿಗಳು ಗುಂಡಿಟ್ಟು ಕೊಂದು ಬಳಿಕ ಆಕೆಯ ಮುಖವನ್ನು ವಿರೂಪಗೊಳಿಸಿದ್ದಾರೆ ಎಂದೂ ಸಹ ವರದಿಯಾಗಿದೆ. ಇನ್ನೂ ಅಫ್ಗಾನ್ ವಶಕ್ಕೆ ಪಡೆಯೋಕು ಮುಂಚೆ ಬಿಗಿಯಾಗಿ ಬುರ್ಖಾ ಧರಿಸಿದ್ದ 21 ವರ್ಷದ ಯುವತಿಯನ್ನೂ ಸಹ ಬರ್ಬರವಾಗಿ ಗುಂಡಿಟ್ಟು ಕೊಲೆ ಮಾಡಿದ್ದನ್ನ ನಾವಿಲ್ಲಿ ಸ್ಮರಿಸಬೇಕು.