ಅಫ್ಘಾನ್ ಬಿಕ್ಕಟ್ಟ : ಫೇಸ್ಬುಕ್ ನಲ್ಲಿ ತಾಲಿಬಾನ್ ಬ್ಯಾನ್!
ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಸದ್ಯ ಉಗ್ರರ ಕಬಂದ ಬಾಹುಗಳಲ್ಲಿರುವ ಅಫ್ಘಾನ್ ನಲ್ಲಿ ಸದ್ಯ ಗುಂಡಿನ ಕಾರುಬಾರು ನಡೆಯುತ್ತಿದೆ. ಉಗ್ರರ ಕಾಟಕ್ಕೆ ಬೆಚ್ಚಿ ಬಿದ್ದಿರುವ ಅಲ್ಲಿನ ಜನರು ಪ್ರಾಣ ಉಳಿಸಿಕೊಳ್ಳಲು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಈ ಮಧ್ಯೆ ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್ ಬುಕ್ ನಲ್ಲಿ ತಾಲಿಬಾನ್ ಬ್ಯಾನ್ ಆಗಿದೆ. ತಾಲಿಬಾನ್ ಅನ್ನು ಉಗ್ರ ಸಂಘಟನೆಯಾಗಿ ಗುರುತಿಸಿ, ಅದಕ್ಕೆ ಸಂಬಂಧಪಟ್ಟಂತಹ ಎಲ್ಲಾ ರೀತಿಯ ಮಾಹಿತಿ ಸಮಾಚಾರವನ್ನು ಬ್ಯಾನ್ ಮಾಡಲಾಗಿದೆ.
ಈ ಮಧ್ಯೆ ಕಾಬೂಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದ ತಾಲಿಬಾನ್ ಇದೀಗ ಮಹತ್ವದ ಪ್ರಕಟಣೆಯೊಂದು ಘೋಷಣೆ ಮಾಡಿದ್ದು, ಸರ್ಕಾರಿ ಉದ್ಯೋಗಿಗಳು ಕೆಲಸಕ್ಕೆ ಮರಳುವಂತೆ ಮನವಿ ಮಾಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕೆಲವು ವಿದ್ಯಾಮಾನಗಳ ಬಗ್ಗೆ ಕ್ಷಮೆ ಇರಲಿ, ಎಲ್ಲರನ್ನೂ ಕ್ಷಮೆ ಕೇಳುತ್ತೇವೆ. ನೀವು ನಿಮ್ಮ ದಿನನಿತ್ಯದ ಜೀವನವನ್ನು ಪ್ರಾರಂಭಿಸಬೇಕು. ಪ್ರತಿದಿನದ ಜೀವನದಂತೆ ಮತ್ತೆ ನಿಮ್ಮ ಜೀವನ ಪ್ರಾರಂಭ ಮಾಡಿ, ಸರ್ಕಾರಿ ಉದ್ಯೋಗಿಗಳು ಮತ್ತೆ ತಮ್ಮ ಕೆಲಸಕ್ಕೆ ಮರಳುವಂತೆ ಮನವಿ ಮಾಡಿಕೊಂಡಿದೆ.









