ಕಾಬೂಲ್ ಭಾರತೀಯ ರಾಯಭಾರಿ ಕಛೇರಿ ಮುಂದೆ ವೀಸಾಗಾಗಿ ಅಫ್ಘಾನ್ ವಿದ್ಯಾರ್ಥಿಗಳ ಪ್ರತಿಭಟನೆ
ನೂರಾರು ಅಫಘಾನ್ ವಿದ್ಯಾರ್ಥಿಗಳು ಬುಧವಾರ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಶಿಕ್ಷಣವನ್ನು ಮುಂದುವರಿಸಲು ಎಲೆಕ್ಟ್ರಾನಿಕ್ ವೀಸಾಗಳನ್ನು ನೀಡುವಂತೆ ಭಾರತ ಸರ್ಕಾರವನ್ನ ವಿನಂತಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ, ಭಾರತೀಯ ವಿಶ್ವವಿದ್ಯಾನಿಲಯಗಳಿಗೆ ದಾಖಲಾದ ಆಫ್ಘನ್ ವಿದ್ಯಾರ್ಥಿಗಳು ಇನ್ನೂ ಭಾರತಕ್ಕೆ ಮರಳಲು ವೀಸಾಗಳ ವಿತರಣೆಗಾಗಿ ಕಾಯುತ್ತಿದ್ದಾರೆ. ಅಫ್ಘಾನಿಸ್ತಾನದ ವಿವಿಧ ಭಾಗಗಳಿಂದ 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಫ್‌ಲೈನ್ ತರಗತಿಗಳಿಗೆ ಸೇರಲು ಸಾಧ್ಯವಾಗುತ್ತಿಲ್ಲ.
ಅಫ್ಘಾನಿಸ್ತಾನದಲ್ಲಿರುವ ವಿದ್ಯಾರ್ಥಿಗಳಿಗೆ ವೀಸಾಗಳನ್ನು ತ್ವರಿತವಾಗಿ ನೀಡುವಂತೆ ವಿದ್ಯಾರ್ಥಿಗಳು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಾಲಿಬಾನ್ ಹೋರಾಟಗಾರರು ಆಗಸ್ಟ್ 15, 2021 ರಂದು ರಾಜಧಾನಿ ಕಾಬೂಲ್ ಅನ್ನು ಪ್ರವೇಶಿಸಿದರು, ನಂತರ ಅಫ್ಘಾನ್ ಸರ್ಕಾರವು ಪತನವಾಯಿತು.
ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಇ-ವೀಸಾಗಳನ್ನು ನೀಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದರು.