500 ವರ್ಷಗಳ ಬಳಿಕ ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರದಲ್ಲಿ ಹೋಳಿ ಆಚರಣೆ

1 min read
holi celebration in ayodhya

500 ವರ್ಷಗಳ ಬಳಿಕ ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರದಲ್ಲಿ ಹೋಳಿ ಆಚರಣೆ

ಅಯೋಧ್ಯೆ: 500 ವರ್ಷಗಳಲ್ಲಿ ಮೊದಲ ಬಾರಿಗೆ ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರದಲ್ಲಿ ಹೋಳಿ ಆಚರಿಸಲಾಗುವುದು. ರಾಮ್ ಲಾಲಾ ಅವರ ಪ್ರತಿಮೆಯನ್ನು ಟೆಂಟ್‌ ನಿಂದ ದೇವಸ್ಥಾನದಲ್ಲಿ ಸ್ಥಾಪಿಸಿದ ಬಳಿಕದ ಮೊದಲ ಹೋಳಿ ಇದು ಎಂದು ರಾಮ ಜನ್ಮ ಭೂಮಿ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ. ರಾಮ್ ಲಾಲಾ ಮೂರು ದಶಕಗಳ ಕಾಲ ತಾತ್ಕಾಲಿಕ ಟೆಂಟ್‌ನಲ್ಲಿಯೇ ಇದ್ದು ಉತ್ಸವಗಳಿಂದ ದೂರವಿದ್ದರು. ಈ ವರ್ಷ ತಮ್ಮ ಜನ್ಮಸ್ಥಳ ವಿಮೋಚನೆಯ ನಂತರ ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ಹೇಳಿದರು.

ಟೆಂಪಲ್ ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ, ಮೊಘಲ್ ಚಕ್ರವರ್ತಿ ಬಾಬರ್ ಕಮಾಂಡರ್ ಮಿರ್ ಬಾಕಿ 1528 ರಲ್ಲಿ ದಾಳಿ ಮಾಡಿದ ನಂತರ, ಹೋಳಿ ಹಬ್ಬವನ್ನು ಇಲ್ಲಿ ಆಡಂಬರದ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗಿಲ್ಲ.
ಐದು ನೂರು ವರ್ಷಗಳ ನಂತರ, ನಾವು ರಾಮ್ ಲಾಲಾ ಅವರ ಸನ್ನಿಧಾನದಲ್ಲಿ ಬಣ್ಣಗಳ ಹಬ್ಬವನ್ನು ಆಚರಿಸುತ್ತೇವೆ. ಹೊಸ ಯುಗ ಪ್ರಾರಂಭವಾಗಿದೆ. ನೈಸರ್ಗಿಕ ಬಣ್ಣಗಳು ಮತ್ತು ಪರಿಮಳಯುಕ್ತ ‘ಗುಲಾಲ್’ ಅನ್ನು ಉತ್ಸವದಲ್ಲಿ ಬಳಸಲಾಗುತ್ತದೆ‌ ಎಂದು ಹೇಳಿದರು.
holi celebration in ayodhya

ರಾಮ ದರ್ಬಾರ್ ಸಂಕೀರ್ಣದ ಎಲ್ಲಾ ಭಾಗಗಳನ್ನು ಹೂವುಗಳಿಂದ ಅಲಂಕರಿಸಲಾಗುವುದು. ಇದನ್ನು ದೇಶದ ವಿವಿಧ ಮೂಲೆಗಳಿಂದ ತರಲಾಗುತ್ತದೆ. ರಾಮ ಮಂದಿರ ಟ್ರಸ್ಟ್ ಹೋಳಿಗಾಗಿ ಮಾಡಬೇಕಾದ ಆಚರಣೆಗಳ ಕುರಿತು ಪುರೋಹಿತರೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ. ರಾಮ ಮಂದಿರ ನಿರ್ಮಾಣವೂ ಪ್ರಾರಂಭವಾದ ಕಾರಣ ಆಚರಣೆಯ ಸಂಭ್ರಮವನ್ನು ದ್ವಿಗುಣಗೊಳಿಸಿದೆ. ನ್ಯಾಯಾಲಯವು ಸುದೀರ್ಘ ವರ್ಷಗಳ ವಿಚಾರಣೆಯ ನಂತರ 2019 ರ ನವೆಂಬರ್‌ನಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಿದೆ. ಇದು ಬಹುಕಾಲದಿಂದ ವಿವಾದಿತ ಭೂಮಿಯಾಗಿತ್ತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd