ADVERTISEMENT
Sunday, July 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಗಿಚ್ಚಿ ಗಿಲಿ ಗಿಲಿ… ವಾರೇ ವ್ಹಾ… ಶುಭ್ಮನ್ ಗಿಲ್…!

After captaincy and runs, Shubman Gill gets aura, Virat Kohli calls him ‘star boy’

Shwetha by Shwetha
July 6, 2025
in ಕ್ರಿಕೆಟ್, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಸಚಿನ್ ತೆಂಡುಲ್ಕರ್‍ನ ಕ್ಲಾಸ್ & ಮಾಸ್ ಶೈಲಿಯೂ ಅಲ್ಲ.. ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಪ್ರವೃತ್ತಿಯೂ ಅಲ್ಲ…ಯಾರ ಹೋಲಿಕೆಯೂ ಅಲ್ಲವೇ ಅಲ್ಲ.. ಥೇಟ್ ಶುಬ್ಮನ್ ಗಿಲ್ ಸ್ಟೈಲ್ ಅಷ್ಟೇ..! ಯಾರ ಅನುಕರಣೆಯೂ ಇಲ್ಲ.. ಚಿಕ್ಕಂದಿನಿಂದ ತಾನೂ ಹೇಗೆ ಆಡಿಕೊಂಡು ಬಂದಿದ್ದೇನೋ ಅದೇ ಆಟ ಅಷ್ಟೇ..! ಇದು ಶುಭ್ಮನ್ ಗಿಲ್ ಸ್ಪೇಷಾಲಿಟಿ..!

25ರ ಹರೆಯದಲ್ಲೇ ಟೀಮ್ ಇಂಡಿಯಾದ ನಾಯಕನ ಪಟ್ಟ.. ಹಾಗೇ ನೋಡಿದ್ರೆ ಟೀಮ್ ಇಂಡಿಯಾದ ನಾಯಕನ ಸ್ಥಾನಮಾನ ಅಂದ್ರೆ ಅದು ಬೆಂಕಿಯಲ್ಲಿ ಕಾದ ಬಾನಲೆ..! ಯಾವಾಗ ಏನು ಬೇಕಾದ್ರೂ ಆಗಬಹುದು.. ಕೋಟಿ ಕೋಟಿ ಅಭಿಮಾನಿಗಳ ನಿರೀಕ್ಷೆಗಳು.. ಒಂದು ನಿರ್ಧಾರದ ಎಡವಟ್ಟಿಗೆ ಟೀಕೆಗಳ ಸುರಿಮಳೆ..ಆರೋಪಗಳು.. ಕ್ರಿಕೆಟ್ ಪಂಡಿತರ ವಿಶ್ಲೇಷಣೆ..ಅಬ್ಬಾಬ್ಬ ಒಂದಲ್ಲ.. ಎರಡಲ್ಲ.. ಸಾಲು ಸಾಲು ಸವಾಲುಗಳು ಟೀಮ್ ಇಂಡಿಯಾದ ನಾಯಕನಿಗಿರುತ್ತದೆ. ಬಹುಶಃ ವಿಶ್ವ ಕ್ರಿಕೆಟ್ ತಂಡದ ಯಾವುದೇ ನಾಯಕನೂ ಎದುರಿಸದ ಸವಾಲುಗಳನ್ನು ಟೀಮ್ ಇಂಡಿಯಾದ ನಾಯಕ ಎದುರಿಸಬೇಕಾಗುತ್ತದೆ. ಅಷ್ಟೊಂದು ಅಗ್ನಿಪರೀಕ್ಷೆ ಟೀಮ್ ಇಂಡಿಯಾದ ನಾಯಕನಿಗಿರುತ್ತದೆ.
ಹಾಗೇ ನೋಡಿದ್ರೆ ಶುಭ್ಮನ್ ಗಿಲ್ ಈ ಎಲ್ಲಾ ಸವಾಲು, ಅಗ್ನಿಪರೀಕ್ಷೆಗಳನ್ನು ಮೆಟ್ಟಿ ನಿಲ್ಲುವ ಸೂಚನೆ ನೀಡಿದ್ದಾರೆ. ಒಬ್ಬ ಆಟಗಾರನ ಕರ್ತವ್ಯ, ಒಬ್ಬ ನಾಯಕನ ಜವಾಬ್ದಾರಿಯನ್ನು ಅಷ್ಟೇ ಸುಲಲಿತವಾಗಿ ನಿಭಾಯಿಸುತ್ತಿರುವ ರೀತಿಗೆ ಸಲಾಂ ಅನ್ನಲೇಬೇಕು.
ಅಂದ ಹಾಗೇ, ಭವಿಷ್ಯದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯ ದಾಖಲೆಗಳು ಗಿಲ್ ಅಳಿಸಿ ಹಾಕ್ತಾರೆ ಅನ್ನೋದನ್ನು ಈಗಲೇ ಹೇಳುವುದು ಕಷ್ಟ.. ಆದ್ರೆ ಗಿಲ್ ಆಡುವ ರೀತಿ ನೋಡಿದ್ರೆ ಕ್ರಿಕೆಟ್ ಗಾಡ್ ಹಾಗೂ ಚೇಸಿಂಗ್ ಗಾಡ್‍ನ ಹಾದಿಯಲ್ಲೇ ಮುನ್ನಡೆಯುತ್ತಾರೆ ಅನ್ನೋ ಆಶಾಭಾವನೆಯಂತೂ ಇದ್ದೇ ಇದೆ.

Related posts

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

July 12, 2026
NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ ಡಿಕೆ ಶಿವಕುಮಾರ್

July 12, 2026

ಸದ್ಯ ಶುಭ್ಮನ್ ಗಿಲ್ ಟೀಮ್ ಇಂಡಿಯಾದ ರಾಜಕುಮಾರ. ಮುಂದೆ ಮಹಾರಾಜ ಆಗೋ ಸಾಧ್ಯತೆಗಳು ದಟ್ಟವಾಗಿವೆ. ನಾಯಕನಾಗಿ ಇಂಗ್ಲೆಂಡ್ ನೆಲದಲ್ಲಿ ಆಡಿರುವ ರೀತಿಯನ್ನು ನೋಡಿದಾಗ ಟೀಮ್ ಇಂಡಿಯಾದ ಸದ್ಯದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗ್ತಾರೆ ಅನ್ನೋ ವಿಶ್ವಾಸವಂತೂ ಮೂಡಿದೆ.

ಹಾಗೇ ನೋಡಿದ್ರೆ, ಶುಭ್ಮನ್ ಗಿಲ್ ಆಟದಲ್ಲಿ ಯಾವುದೇ ಒತ್ತಡಗಳಿಲ್ಲ.. ಆರಾಮವಾಗಿ ಆಡಿಕೊಂಡು ಹೋಗುತ್ತಿದ್ದಾರೆ. ಕ್ರಿಕೆಟ್ ಆಟವನ್ನು ಎಂಜಾಯ್ ಮಾಡಿಕೊಂಡು ಆಡ್ತಾ ಇದ್ದಾರೆ. ಯಾರ ಕಾಪಿ ಪೇಸ್ಟ್ ಇಲ್ಲದೆ ತನ್ನದೇ ಶೈಲಿಯಲ್ಲಿ ಆಡುತ್ತಿರುವ ಗಿಲ್ ಆಟವನ್ನು ನೋಡಿದಾಗ ಯಾವುದೇ ಆತಂಕವಿರುವುದಿಲ್ಲ. ಎಲ್ಲವನ್ನು ಲೀಲಾಜಾಲ. ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ಆಡುವ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ವಯಸ್ಸು 25 ಆದ್ರೂ ಹುಡುಗಾಟದ ಆಟವಿದ್ರೂ ಪ್ರಬುದ್ಧತೆ ಇದೆ. ಎದುರಾಳಿ ತಂಡದ ಮೈಂಡ್ ಗೇಮ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬೌಲರ್‍ಗಳನ್ನು ಕನ್‍ಫ್ಯೂಸ್ ಮಾಡಿಕೊಂಡು ತಂಡಕ್ಕೆ ಭದ್ರ ಅಡಿಪಾಯ ಹಾಕುವಂತಹ ತಂತ್ರಗಾರಿಕೆಯೂ ಇದೆ. ಸೈಲೆಂಂಟ್ ಆಗಿಯೇ ತಂಡದ ರನ್ ಗತಿಯನ್ನು ಏರಿಸುವಾಗ ಅಬ್ಬರ ಕಂಡ್ರೂ ಕ್ಷಣ ಮಾತ್ರದಲ್ಲೇ ಅಷ್ಟೇ ತಾಳ್ಮೆಯೂ ಗಿಲ್ ಬ್ಯಾಟಿಂಗ್ ನಲ್ಲಿದೆ.

ಹೀಗಾಗಿಯೇ ಇಂಗ್ಲೆಂಡ್ ನೆಲದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಗಿಲ್ ತನ್ನ ಹೆಸರಿಗೆ ಬರೆಸಿಕೊಳ್ಳುತ್ತಿದ್ದಾರೆ. ಚೊಚ್ಚಲ ನಾಯಕತ್ವದಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ಗಿಲ್, ನಾಯಕತ್ವಗಿಂತಲೂ ಬ್ಯಾಟಿಂಗ್‍ನಲ್ಲಿ ಪ್ರಕಾಶಿಸುತ್ತಿದ್ದಾರೆ.

ಸಾಮಾನ್ಯವಾಗಿ ವಿದೇಶಿ ನೆಲದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವಾಗ ಸಾಕಷ್ಟು ಒತ್ತಡಗಳಿರುತ್ತವೆ. ಆದ್ರೆ ಗಿಲ್ ಎಲ್ಲಾ ಟೆನ್ಶನ್‍ಗಳನ್ನು ಸುಸೂತ್ರವಾಗಿ ನಿಭಾಯಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಅದರಲ್ಲೂ ಬ್ಯಾಟಿಂಗ್‍ನಲ್ಲಿ ಯಾವುದೇ ಒತ್ತಡಗಳು ಅವರ ಮುಖದಲ್ಲಿ ಕಾಣುವುದಿಲ್ಲ. ಅದರಲ್ಲೂ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‍ನಲ್ಲಿ ದ್ವಿಶತಕ, ಎರಡನೇ ಇನಿಂಗ್ಸ್‍ನಲ್ಲಿ 150 ಪ್ಲಸ್ ರನ್ ಹೊಡೆದ ರೀತಿಯಂತೂ ಬಣ್ಣಿಸಲು ಸಾಧ್ಯವಿಲ್ಲ. ಇಂಗ್ಲೀಷ್ ಬೌಲರ್‍ಗಳನ್ನು ತನ್ನ ಹುಡುಗಾಟದ ದಿನದಲ್ಲಿ ಆಡುತ್ತಿದ್ದ ರೀತಿಯಲ್ಲಿ ಕಾಡಿದ ಗಿಲ್ ಟೀಮ್ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಆಗುವ ಎಲ್ಲಾ ಸೂಚನೆಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ರಿಷಬ್ ಪಂತ್ ಜೊತೆ ಜಿದ್ದಿಗೆ ಬಿದ್ದಂಗೆ ಆಡುತ್ತಿದ್ದಂತೆ ಕಾಣುತ್ತದೆ.

ಒಟ್ಟಿನಲ್ಲಿ ಶುಭ್ಮನ್ ಗಿಲ್ ಅವರ ಮನಮೋಹಕ ಆಟದ ಮುಂದೆ ಹಲವು ದಶಕಗಳ ದಾಖಲೆಗಳು ಉಢೀಸ್ ಆಗಿವೆ. ಅದರಲ್ಲೂ ಟೀಮ್ ಇಂಡಿಯಾದ ಟೆಸ್ಟ್ ಕ್ರಿಕೆಟ್‍ನ ಭವಿಷ್ಯದ ಪರಂಪರೆಯನ್ನು ಜೈಸ್ವಾಲ್, ಗಿಲ್, ಪಂತ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತಿದೆ. ಯಾವುದಕ್ಕೂ ಕಾದು ನೋಡೋಣ…!

ShareTweetSendShare
Join us on:

Related Posts

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

by Shwetha
July 12, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಎಂಬ ಹಳೇ ಗಾದೆ ಮಾತು ಮತ್ತೊಮ್ಮೆ ಅಕ್ಷರಶಃ ನಿಜವಾಗಿದೆ. ರಾಜ್ಯ ರಾಜಕಾರಣ ಹಾಗೂ ಪಕ್ಷದ...

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ ಡಿಕೆ ಶಿವಕುಮಾರ್

by Shwetha
July 12, 2026
0

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ಹಳೆ ಪಿಂಚಣಿ ಯೋಜನೆ ಅಂದರೆ ಓಪಿಎಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಮಹತ್ವದ ಹೆಜ್ಜೆ ಇಟ್ಟಿದೆ....

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

by Shwetha
July 12, 2026
0

ಬೆಂಗಳೂರು: ಕಾಂಗ್ರೆಸ್ ನ ಪ್ರಭಾವಿ ನಾಯಕ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಂಕಷ್ಟದ ಕಾರ್ಮೋಡ ಕವಿದಿದೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ...

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

by Shwetha
July 12, 2026
0

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳವನ್ನು ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಈಗ ದೊಡ್ಡ ಮಟ್ಟದ ಸಾಂಸ್ಕೃತಿಕ ಸಂಘರ್ಷಕ್ಕೆ ನಾಂದಿ...

ನನ್ನ ಹತ್ಯೆಗೆ ಸಂಚು ನಡೆಸಿದರೆ ಇರಾನ್ ಭೂಪಟದಿಂದಲೇ ನಾಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನನ್ನ ಹತ್ಯೆಗೆ ಸಂಚು ನಡೆಸಿದರೆ ಇರಾನ್ ಭೂಪಟದಿಂದಲೇ ನಾಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

by Shwetha
July 12, 2026
0

ವಾಷಿಂಗ್ಟನ್: ತನ್ನ ವಿರುದ್ಧ ಹತ್ಯೆ ಅಥವಾ ಹತ್ಯೆಗೆ ಸಣ್ಣ ಪ್ರಯತ್ನ ನಡೆದರೂ ಇರಾನ್ ದೇಶವನ್ನು ಸಂಪೂರ್ಣವಾಗಿ ನಾಶಮಾಡಿ ಧ್ವಂಸಗೊಳಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram