ಸೆಪ್ಟೆಂಬರ್ 22ರಿಂದ ದೇಶದಾದ್ಯಂತ ಹೊಸ GST ಸ್ಲ್ಯಾಬ್‌ಗಳು ಜಾರಿಗೆ ಬರಲಿವೆ. ಇದರ ಪರಿಣಾಮವಾಗಿ ಅನೇಕ ವಸ್ತುಗಳ ಬೆಲೆಯಲ್ಲಿ ಇಳಿಕೆ ಕಾಣಬಹುದು. ಗ್ರಾಹಕರು ಈ ದಿನಾಂಕದ ನಂತರ ಖರೀದಿಸುವ ವಸ್ತುಗಳಿಗೆ ನವೀಕರಿಸಿದ GST ದರಗಳು ಅನ್ವಯವಾಗಲಿವೆ.
ಹೊಸ ನಿಯಮದಂತೆ ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂ ಮೇಲೆ ವಿಧಿಸಲಾಗುತ್ತಿದ್ದ GST ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರಿಂದ ವಿಮಾ ಪ್ರೀಮಿಯಂಗಳ ವೆಚ್ಚದಲ್ಲಿ ಇಳಿಕೆ ಸಂಭವಿಸಲಿದೆ.
ಅದೇ ರೀತಿ, ವಾಹನ ಮಾರುಕಟ್ಟೆಯಲ್ಲಿಯೂ ಚಲನವಲನ ಶುರುವಾಗಿದೆ. ಈಗಾಗಲೇ ಕೆಲ ಕಾರು ಕಂಪನಿಗಳು ಬೆಲೆ ಇಳಿಕೆಯನ್ನು ಘೋಷಿಸಿರುವುದು ಗ್ರಾಹಕರಿಗೆ ಸುವಾರ್ತೆಯಾಗಿದೆ.
ಇ-ಕಾಮರ್ಸ್ ಕ್ಷೇತ್ರದಲ್ಲಿಯೂ ಪರಿಣಾಮ ಉಂಟಾಗಲಿದೆ. Flipcart ಮತ್ತು Amazon ಮುಂತಾದ ಇ-ಕಾಮರ್ಸ್ ದಿಗ್ಗಜಗಳು ಹೊಸ GST ನಿಯಮಗಳನ್ನು ಸೆ.22ರಿಂದಲೇ ಜಾರಿಗೆ ತರುವುದಾಗಿ ಸ್ಪಷ್ಟಪಡಿಸಿವೆ. ಇದರೊಂದಿಗೆ ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ಕೂಡ ಬೆಲೆ ಕಡಿತದ ಲಾಭ ಸಿಗಲಿದೆ.
ಒಟ್ಟಾರೆ, ಸೆಪ್ಟೆಂಬರ್ 22 ಬಳಿಕ ಗ್ರಾಹಕರಿಗೆ ಖರೀದಿ ಹೆಚ್ಚು ಲಾಭದಾಯಕವಾಗಲಿದೆ ಎಂಬ ನಿರೀಕ್ಷೆ ಮೂಡಿದೆ.








