Agneepath Scheme | ಬಿಜೆಪಿ – ಕಾಂಗ್ರೆಸ್ ಟ್ವೀಟ್ ವಾರ್..!
1 min read
Karnataka BJP | Fight Against the Agnipath Plan Congress crafted tool kit saaksha tv
Agneepath Scheme | ಬಿಜೆಪಿ – ಕಾಂಗ್ರೆಸ್ ಟ್ವೀಟ್ ವಾರ್
ಬೆಂಗಳೂರು : ಅಗ್ನಿಪಥ್ ಯೋಜನೆ ನಿರುದ್ಯೋಗಿಗಳನ್ನು ತಯಾರು ಮಾಡುವುದೇ ಹೊರತು ಯೋಧರನ್ನಲ್ಲ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಅಗ್ನಿಪಥ್ ಯೋಜನೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದು ಕಾಂಗ್ರೆಸ್ ಪ್ರೇರಿತ ಎಂದು ಬಿಜೆಪಿ ಆರೋಪಿಸಿದ್ದು, ಅಗ್ನಿಪಥ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ. ದೇಶದ ಯುವಶಕ್ತಿಗೆ ಪ್ರೇರಣೆ ನೀಡಬಲ್ಲ ಏಕೈಕ ಮಾರ್ಗವಿದು – ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ. ಕಾಂಗ್ರೆಸ್ಸಿಗರೇ, 3 ಸೇನಾಪಡೆಗಳ ಮುಖ್ಯಸ್ಥರು #Agnipath ಯೋಜನೆ ಸ್ವಾಗತಿಸಿದ್ದಾರೆ, ನೀವೇಕೆ ದೇಶದ ವಿರುದ್ಧ ಹೋಗುತ್ತಿದ್ದೀರಿ?
ಸೇನೆಯ ಆಗುಹೋಗು, ಅನಿವಾರ್ಯತೆಯ ಬಗ್ಗೆ ಮಾತನಾಡಬೇಕಿರುವುದು ಸೇನಾ ಮುಖ್ಯಸ್ಥರೇ ಹೊರತು ಕಾಂಗ್ರೆಸ್ ನಾಯಕರಲ್ಲ.ಅಗ್ನಿಪಥ್ ಯೋಜನೆಯಿಂದ ಸೇನೆಯ ರೆಜಿಮೆಂಟ್ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲವೆಂದು ಅನಿಲ್ ಪುರಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ಸಿಗರೇ, ಸೇನೆಯ ವಿಚಾರದಲ್ಲಿ ರಾಜಕೀಯವೇಕೆ?
ಅಗ್ನಿಪಥ್ ಯೋಜನೆ ನಿರುದ್ಯೋಗಿಗಳನ್ನು ತಯಾರು ಮಾಡುವುದೇ ಹೊರತು ಯೋಧರನ್ನಲ್ಲ.
ನಿಯಮದ ಅನುಸಾರ 'ನಿವೃತ್ತ ಯೋಧ' ಎಂದು ಪರಿಗಣಿಸಲು ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು, 4 ವರ್ಷ ಸೇವೆ ಮಾಡುವ ಅಗ್ನಿವೀರರಿಗೆ ಆ ಗೌರವವೂ ದೊರಕುವುದಿಲ್ಲ.
ವೃತ್ತಿ ಕೌಶಲ್ಯ ನೀಡುತ್ತೇವೆ ಎಂದಿರುವ ಸರ್ಕಾರ ತನ್ನ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಮುಚ್ಚಿದೆಯೇ?
— Karnataka Congress (@INCKarnataka) June 22, 2022
ಅಗ್ನಿವೀರರಿಂದ ಸೇನೆಯ ಸಾಮರ್ಥ್ಯ ಕುಂದುವುದಿಲ್ಲ. ಬದಲಾಗಿ ತಾರುಣ್ಯ ತುಂಬುತ್ತದೆ. ಅಗ್ನಿವೀರ್ ಎಂಬ ಪದನಾಮವೇ ಶೌರ್ಯ ಪ್ರಶಸ್ತಿಗೆ ಅರ್ಹತೆಯಾಗಬಲ್ಲುದು. ಅಗ್ನಿಪಥ್ ಯೋಜನೆಯ ಮೂಲಕ ಸೇನಾಪಡೆಗೆ ಅತ್ಯುತ್ತಮ ಪ್ರತಿಭೆಗಳು ಸೇರಿಕೊಳ್ಳಲಿದ್ದಾರೆ. ಸೇನೆಯನ್ನು ದುರ್ಬಲವಾಗಿಡುವುದು ಕಾಂಗ್ರೆಸ್ ಆಶಯವೇ ಎಂದು ಪ್ರಶ್ನೆಗಳನ್ನು ಕೇಳಿದೆ.
ಇದಕ್ಕೆ ಟಾಂಗ್ ನೀಡಿರುವ ರಾಜ್ಯ ಕಾಂಗ್ರೆಸ್, ಅಗ್ನಿಪಥ್ ಯೋಜನೆ ನಿರುದ್ಯೋಗಿಗಳನ್ನು ತಯಾರು ಮಾಡುವುದೇ ಹೊರತು ಯೋಧರನ್ನಲ್ಲ. ನಿಯಮದ ಅನುಸಾರ ‘ನಿವೃತ್ತ ಯೋಧ’ ಎಂದು ಪರಿಗಣಿಸಲು ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು, 4 ವರ್ಷ ಸೇವೆ ಮಾಡುವ ಅಗ್ನಿವೀರರಿಗೆ ಆ ಗೌರವವೂ ದೊರಕುವುದಿಲ್ಲ. ವೃತ್ತಿ ಕೌಶಲ್ಯ ನೀಡುತ್ತೇವೆ ಎಂದಿರುವ ಸರ್ಕಾರ ತನ್ನ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಮುಚ್ಚಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.