ADVERTISEMENT
Sunday, May 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಅಗ್ನಿ ಶ್ರೀಧರ್ ಸಾರಥ್ಯದಲ್ಲಿ ಬರಲಿದೆ “ಕ್ರೀಂ”

Namratha Rao by Namratha Rao
January 14, 2022
in Cinema, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಅಗ್ನಿ ಶ್ರೀಧರ್ ಸಾರಥ್ಯದಲ್ಲಿ ಬರಲಿದೆ “ಕ್ರೀಂ”

ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಲಿರುವ ಈ ಚಿತ್ರಕ್ಕೆ ಅಭಿಷೇಕ್ ಬಸಂತ್ ನಿರ್ದೇಶನ.

Related posts

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

May 30, 2026
ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

May 30, 2026

ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ ಚಿತ್ರಗಳು ಕನ್ನಡ ಚಿತ್ರರಸಿಕರ ಮನಗೆದ್ದಿದೆ. ಈಗ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ

“ಕ್ರೀಂ” ಚಿತ್ರ ಸದ್ಯದಲ್ಲೇ ಆರಂಭವಾಗಲಿದೆ. ಅಭಿಷೇಕ್ ಬಸಂತ್ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. “ಕಿರಿಕ್ ಪಾರ್ಟಿ” ಖ್ಯಾತಿಯ ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಲಿದ್ದಾರೆ. ಡಿ.ಕೆ.ದೇವೇಂದ್ರ  ನಿರ್ಮಾಣ ಮಾಡುತ್ತಿದ್ದಾರೆ.

ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

ಚಿಕ್ಕಂದಿನಿಂದಲೂ ನನಗೆ ಸಿನಿಮಾ ಬಗ್ಗೆ ಆಸಕ್ತಿ. ನನ್ನ ಮನೆಯವರು ನನ್ನನ್ನು ಹಾಗೆ ಬೆಳೆಸಿದ್ದರು. ಆ ನಂತರ ಎಂ ಬಿ ಎ ಹಾಗೂ ಎಂ ಎಸ್ ಮಾಡಿದೆ. ಈಗ ನನ್ನ ಆಸೆಯಂತೆ ಚಿತ್ರರಂಗದತ್ತ ಬಂದಿದ್ದೀನಿ.  ನನ್ನ ಅನುಭವ ಅಂದರೆ ಹೆಡ್ ಬುಷ್ ಚಿತ್ರದಲ್ಲಿ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಗ್ನಿ ಶೀಧರ್ ಸರ್ ಅವರ ಒಡನಾಟದಿಂದ, ಅವರ ಜೊತೆ ಆಡಿರುವ ಮಾತುಗಳಿಂದ ಹೆಚ್ಚಿನ ಅನುಭವ ಪಡಿದಿದ್ದೇನೆ. ನೀನು ನಿರ್ದೇಶನ ಮಾಡು ಎಂದು ಹೇಳಿದ್ದೆ ಅವರು. ಅಗ್ನಿ ಶ್ರೀಧರ್ ಅವರಿಗೆ ನನ್ನ ವಂದನೆಗಳು ಎಂದರು ನಿರ್ದೇಶಕ ಅಭಿಷೇಕ್ ಬಸಂತ್.

ನಾನು ಕಥೆ ಕೇಳಲು ಹೊದಾಗ ತುಂಬಾ ಕುತೂಹಲ ಮನೆಮಾಡಿತ್ತು. ನನ್ನ ಪಾತ್ರದ ಬಗ್ಗೆ ನಾನು ಹೇಳುವುದಕ್ಕಿಂತ ಅಗ್ನಿ ಶ್ರೀಧರ್ ಸರ್ ಹೇಳಿದರೆ ಒಂದು ಕಳೆ. ನಾನು ಈ ಚಿತ್ರದಲ್ಲಿ ಫಿಮೇಲ್ ಹೀರೋ ಅನ್ನಬಹುದು. ಈ ಅವಕಾಶ ನೀಡಿದ್ದಕ್ಕೆ ಅಗ್ನಿ ಶ್ರೀಧರ್ ಸರ್ ಗೆ ಧನ್ಯವಾದ. ನಾನು ಈವರೆಗೂ ಮಾಡಿರದ ಪಾತ್ರ ಅಂತ ಹೇಳಬಹುದು ಎಂದರು ಸಂಯುಕ್ತ ಹೆಗಡೆ.

ನನ್ನ ನಿರ್ಮಾಣದ ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರು ಕಥೆ ಕೊಟ್ಟಿರುವುದಕ್ಕೆ ಹೆಚ್ಚು ಖುಷಿಯಾಗಿದೆ. ಅವರಿಗೆ ವಿಶೇಷ ಧನ್ಯವಾದ. ಪ್ರೇಕ್ಷಕರಿಗೆ ಕೊಟ್ಟ ದುಡ್ಡಿಗೆ ಮೋಸ ಆಗದಂತಹ ಚಿತ್ರವಿದು. ತೆಲುಗಿನಲ್ಲಿ ಕೆಲವು ಚಿತ್ರ ನಿರ್ಮಾಣ ಮಾಡಿ ಮತ್ತೆ ಈಗ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದೀನಿ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ದೇವೇಂದ್ರ .

ನನ್ನ ಪರಿಚಯಸ್ಥರೊಬ್ಬರ ಮೂಲಕ ದೇವೇಂದ್ರ ಅವರು ನನ್ನನ್ನು ಭೇಟಿಯಾಗಿ ಸಿನಿಮಾ ಮಾಡೋಣ ಅಂತ ಇದ್ದೀನಿ . ನಿಮ್ಮ ಕಥೆ ಬೇಕು ಎಂದರು. ನಾನು ಈಗ ಬೇಡ. ಬೇರೆ ಚಿತ್ರವೊಂದಕ್ಕೆ ಕಥೆ ಬರೆಯುತ್ತಿದ್ದೀನಿ‌ ಅಂದೆ. ಆದರೆ ದೇವೇಂದ್ರ ಅವರು ಮಾತನಾಡುವ ರೀತಿಗೆ ಒಪ್ಪಿಕೊಳ್ಳಲೆ ಬೇಕಾಯಿತು.  ‌ನನ್ನ ಹಿಂದಿನ ಕಥೆಗಳಿಗಿಂತ ಇದು ಭಿನ್ನವಾಗಿರಲಿದೆ. ವಾಸ್ತಾವಾಂಶಗಳು ಕಥೆಯಲ್ಲಿ ಹೆಚ್ಚಿರುತ್ತದೆ. ನಿರ್ದೇಶಕ ಅಭಿಷೇಕ್ ನನ್ನು ಹುಟ್ಟಿದ ದಿನದಿಂದ ಬಲ್ಲೆ. ಅವರ ಅಪ್ಪ ಕೂಡ ಪರಿಚಿತರು.

ನೀನು ನಟನೆಗಿಂತ ಹಚ್ಚಾಗಿ ನಿರ್ದೇಶಕನಾಗುವುದು ಒಳ್ಳೆಯದು ಅಂತ ಅಭಿಷೇಕ್ ಗೆ ಹೇಳಿದೆ. ಈ ಚಿತ್ರದ ಮೂಲಕ ಆತ ನಿರ್ದೇಶಕನಾಗುತ್ತಿದ್ದಾನೆ. ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ನಟಿಯರ ಆಯ್ಕೆಯಲ್ಲಿದ್ದಾಗ, ಈ ಪಾತ್ರಕ್ಕೆ ಸಂಯುಕ್ತ ಹೆಗಡೆ ನನಗೆ ಸೂಕ್ತ ಅನಿಸಿದರು. ಸಂಯುಕ್ತ ಹೆಗಡೆ  ನನ್ನ ಭೇಟಿಯಾಗಲು ಬಂದಾಗ, ಎದುರು ನಿಂತಿರುವ ನಿರ್ದೇಶಕರೊಡನೆ  ಕಿಕ್ ಬಾಕ್ಸಿಂಗ್ ಮಾಡಲು‌ ಹೇಳಿದೆ. ಆಕೆ  ತಕ್ಷಣ ಸಿದ್ದವಾದರು.

ನಾನು ಅವರು ಯಾರನಾದರೂ ಕಳುಹಿಸಿ ಕೊಡಿ ಕಲಿಯುತ್ತೇನೆ ಅಂತ ಹೇಳಬಹುದು ಅಂದುಕೊಂಡೆ. ಆದರೆ ಅವರು ತಕ್ಷಣ ಸಿದ್ದವಾದರು. ಆಗ ಈ ಪಾತ್ರಕ್ಕೆ ನನ್ನ ಆಯ್ಕೆ ಸರಿ‌ ಎನಿಸಿತು. ಅರುಣ್ ಸಾಗರ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಆಗಸ್ಟ್‌ -ಸೆಪ್ಟೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. “ಕ್ರೀಂ” ಎಂದರೆ ಸಂಸ್ಕೃತದಲ್ಲಿ ಬರುವ ದೇವಿಯ ಕುರಿತಾದ ಮಂತ್ರ. ಈ  ಸದ್ಯಕ್ಕೆ ಚಿತ್ರದ ಬಗ್ಗೆ ಇಷ್ಟು ಮಾಹಿತಿ ನೀಡಬಹುದು ಎಂದರು ಅಗ್ನಿ ಶ್ರೀಧರ್.

ರೋಶನ್ ಅವರ ಬಳಿ ನನ್ನ‌ ಮಗ ಕಿಕ್ ಬಾಕ್ಸಿಂಗ್ ಗೆ ಹೋಗುತ್ತಾನೆ.  ಅವರ ಬಳಿ ನಾನು ಹೇಳುತ್ತಿದ್ದೆ. ಒಂದು ಸಲ ನಾನು ಅಗ್ನಿ ಶ್ರೀಧರ್ ಅವರನ್ನು ಭೇಟಿಯಾಗಬೇಕು ಅಂತ. ಆದರೆ ಇತ್ತೀಚೆಗೆ ರೋಶನ್ ಅವರು ಫೋನ್ ಮಾಡಿ ಆಫೀಸಿಗೆ ಬನ್ನಿ ಅಂದರು. ಅಲ್ಲಿ ಶ್ರೀಧರ್ ಅವರನ್ನು ಭೇಟಿ ಮಾಡಿದೆ. ಸಾಕಷ್ಟು ಮಾತನಾಡಿದೆ. ಅವರು ಆಳದ ಹಾಗೂ ಆಳುವ ಮನುಷ್ಯ . ಅವರ ಎಲ್ಲಾ ಕಥೆಗಳು ಚೆನ್ನಾಗಿದೆ. ಈ ಸಿನಿಮಾ ಕೂಡ ಉತ್ತಮವಾಗಿ ಮೂಡುಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು ಚಿತ್ರದಲ್ಲಿ ಅಭಿನಯಿಸುತ್ತಿರುವ ಅರುಣ್ ಸಾಗರ್.

ಈ ಚಿತ್ರದಲ್ಲಿ ರೋಶನ್ ಅವರು ಸಹ ಅಭಿನಯಿಸುತ್ತಿದ್ದಾರೆ.

ಸಮಾರಂಭಕ್ಕೆ ಅತಿಥಿಯಾಗಿ ‌ಆಗಮಿಸಿದ್ದ ಕೆ.ಮಂಜು ಅವರು‌ ಚಿತ್ರತಂಡಕ್ಕೆ ಶುಭಕೋರಿದರು. ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಸಂವರ್ಧಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಕೆ.ದೇವೇಂದ್ರ  ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶಿಸುತ್ತಿದ್ದಾರೆ. ಸುನೋಜ್ ವೇಲಾಯುಧನ್ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Tags: #saakshatvagni shridharkannada filmkreemsamyuktha hegde
ShareTweetSendShare
Join us on:

Related Posts

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

by Shwetha
May 30, 2026
0

ಸ್ವಯಂಪ್ರೇರಿತವಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ವಯಸ್ಕ ಮಹಿಳೆಯರ ವಿರುದ್ಧ ದಾಳಿ ನಡೆಸುವುದು ಅಥವಾ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ....

ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

by Shwetha
May 30, 2026
0

ಬೆಂಗಳೂರು: ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಹಲವು ಸ್ಫೋಟಕ ಮತ್ತು...

ಸಚಿವ ಸಂಪುಟದ ಫೈನಲ್ ಲಿಸ್ಟ್ ಸಿದ್ಧ? ಕೃಷ್ಣ ಬೈರೇಗೌಡರಿಂದ ದಿನೇಶ್ ಗುಂಡುರಾವ್ ವರೆಗೆ ಯಾರಿಗೆ ಸಿಗಲಿದೆ ಚಾನ್ಸ್?

ಸಚಿವ ಸಂಪುಟದ ಫೈನಲ್ ಲಿಸ್ಟ್ ಸಿದ್ಧ? ಕೃಷ್ಣ ಬೈರೇಗೌಡರಿಂದ ದಿನೇಶ್ ಗುಂಡುರಾವ್ ವರೆಗೆ ಯಾರಿಗೆ ಸಿಗಲಿದೆ ಚಾನ್ಸ್?

by Shwetha
May 30, 2026
0

ರಾಜ್ಯ ರಾಜಕಾರಣದಲ್ಲಿ ಇದೀಗ ನೂತನ ಸಚಿವ ಸಂಪುಟ ರಚನೆಯದ್ದೇ ಬಹುದೊಡ್ಡ ಸದ್ದು. ಕಾಂಗ್ರೆಸ್ ವಲಯದಲ್ಲಿ ಸಚಿವ ಸ್ಥಾನಕ್ಕಾಗಿ ಬಿರುಸಿನ ಚಟುವಟಿಕೆಗಳು ಹಾಗೂ ಭಾರೀ ಕಸರತ್ತುಗಳು ತೆರೆಮರೆಯಲ್ಲಿ ನಡೆಯುತ್ತಿವೆ....

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

by Shwetha
May 30, 2026
0

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರ ದೀರ್ಘ ಸಾರ್ವಜನಿಕ ಜೀವನದ ಸೇವೆಯನ್ನು ಶ್ಲಾಘಿಸಿದರು. ಸಾಮಾಜಿಕ ನ್ಯಾಯ,...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

by Shwetha
May 30, 2026
0

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಹೊರಹಾಕಿರುವ ಮಾತುಗಳು ಕೇವಲ ರಾಜಕೀಯ ಹೇಳಿಕೆಗಳಲ್ಲ, ಅವು ಹತ್ತಾರು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಒಬ್ಬ ನಾಯಕನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram