ಧಾರವಾಡದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನಾ ಕಾವು..!
1 min read
ಧಾರವಾಡ : ದೇಶಾದ್ಯಂತ ಹಬ್ಬಿರುವ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನಾ ಕಾವು ಧಾರವಾಡಕ್ಕೂ ಕಾಲಿಟ್ಟಿದೆ.. ಧಾರವಾಡದಲ್ಲಿಯೂ ಯುವಕರು ಪ್ರತಿಭಟನೆ ಸಜ್ಜಾಗಿದ್ದರು.. ನೂರಾರು ಸಂಖ್ಯೆಯಲ್ಲಿ ಯುವಕರು ನಾಯ್ಕ ಅಡ್ಡಾ ಸರ್ಕಲ್ ಬಳಿ ಜಮಾವಣೆಗೊಂಡಿದ್ದರು..
ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜನೆ ಕೂಡ ಮಾಡಲಾಗಿತ್ತು.. ಸ್ಥಳಕ್ಕೆ ಎಡಿಸಿ ಶಿವಾನಂದ ಭಜಂತ್ರಿ ಸೇರಿದಂತೆ ಡಿಸಿಪಿ ಶ್ರೀಶೈಲ ಬ್ಯಾಕೋಡ್ ಭೇಟಿ ನೀಡಿ ಯುವಕರ ಮನವಿ ಸ್ವೀಕರಿಸಿ ಗಲಾಟೆ ಮಾಡದಂತೆ ಸೂಚನೆ ನೀಡಿದರು..
ಈ ವೇಳೆ ಪ್ರತಿಭಟನೆ ಮಾಡುತ್ತಿರೋ ಯುವಕರನ್ನ ಪೊಲೀಸರು ಚದುರಿಸಿದ್ದಾರೆ.. ಈ ಸಂದರ್ಭದಲ್ಲಿ ಪೊಲೀಸರ ಜೊತೆ ಯುವಕರ ಮಾತಿನ ಚಕಮಕಿಯೂ ನಡೆದಿದೆ..