ಹಾವೇರಿ : ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಇಂದು ಐತಿಹಾಸಿಕ ಪ್ರಸಿದ್ಧ ರಟ್ಟಿಹಳ್ಳಿ -ಹಿರೇಕೆರೂರಿನ “ಮದಗಮಾಸೂರು ಕೆರೆ” ( ಕೆಂಚಮ್ಮನ ಕೆರೆ)ಗೆ ಬಾಗಿನ ಅರ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಮೊದಲ ಬಾರಿ ತಾವು ಹಾಗೂ ಯು.ಬಿ.ಬಣಕಾರ್ ಇಬ್ಬರೂ ಸೇರಿ ಬಾಗಿನ ಅರ್ಪಿಸಿರುವುದು ವಿಶೇಷ ಹಾಗೂ ಪುಣ್ಯದ ಕೆಲಸ. ಕೆರೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಇಬ್ಬರೂ ಶ್ರಮಿಸುವುದಾಗಿ ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.
2018-19 ಸಾಲಿನಲ್ಲಿ ಎಡಬಲದಂಡೆಗೆ 25 ಕೋಟಿ ರೂ.ಅಭಿವೃದ್ಧಿಗೆ ಇಡಲಾಗಿತ್ತಾದರೂ ಕೋವಿಡ್ ಕಾರಣದಿಂದ ಹಣದ ಕೊರತೆಯಾಗಿದೆ.ಎಡಬಲ ದಂಡೆಗಳನ್ನು ನವೀಕರಿಸಿ ಕೆರೆಯನ್ನು ಅಭಿವೃದ್ಧಿ ಮಾಡಿ ಕ್ಷೇತ್ರದ ರೈತರು ಹಾಗೂ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು.









