ಈ ಮೂವರು ಆಟಗಾರರ ಮೇಲೆ ಅಹಮದಾಬಾದ್ ಕಣ್ಣು Ahmedabad saaksha tv
ಮುಂದಿನ ಆವೃತ್ತಿಯಿಂದ ಐಪಿಎಲ್ ನಲ್ಲಿ ಹೊಸ ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಟೂರ್ನಿ ಮತ್ತಷ್ಟು ರಸವತ್ತಾಗಲಿದೆ. ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಮುಂದಿನ ವರ್ಷದಿಂದ ಐಪಿಎಲ್ ಸಂಗ್ರಾಮಕ್ಕೆ ಧುಮುಕಲಿವೆ. ಬಿಸಿಸಿಐ ನಿಯಮಗಳ ಪ್ರಕಾರ ಹೊಸ ತಂಡಗಳು ಮೆಗಾ ಹರಾಜಿಗೂ ಮುನ್ನ ನಾನ್ ರಿಟೈನ್ಡ್ ಆಟಗಾರರಲ್ಲಿ ಮೂವರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಡಿಸೆಂಬರ್ 25 ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಮತ್ತು ವಿವರಗಳನ್ನು ಐಪಿಎಲ್ ಮಂಡಳಿಗೆ ಸಲ್ಲಿಸಬೇಕು.
ಹೀಗಾಗಿ ಹೊಸ ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟುವುದರ ಜೊತೆಗೆ ತಂಡದ ಬ್ರ್ಯಾಂಡ್ ಹೆಚ್ಚಿಸುವ ಆಟಗಾರರಿಗೆ ಮಣೆ ಹಾಕಲು ಮುಂದಾಗಿವೆ. ಲಕ್ನೋ ಫ್ರಾಂಚೈಸಿ ಈಗಾಗಲೇ ತನ್ನ ಮೂವರು ಆಟಗಾರರನ್ನು ಫೈನಲ್ ಮಾಡಿಕೊಂಡಿದೆ. ಕೆ.ಎಲ್. ರಾಹುಲ್, ರಶೀದ್ ಖಾನ್, ಇಶಾನ್ ಕಿಶಾನ್ ಲಕ್ನೋ ತಂಡ ಸೇರೋದು ಪಕ್ಕಾ ಆಗಿದೆ.
ಇತ್ತ ಅಹಮದಾಬಾದ್ ಫ್ರಾಂಚೈಸಿ ಕೂಡ ಜಿದ್ದಿಗೆ ಬಿದ್ದಂತೆ ಯುವ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಅವರಿಗೆ ಮಣೆ ಹಾಕಿದೆ. ವರದಿಗಳ ಪ್ರಕಾರ, ಟೀಂ ಇಂಡಿಯಾದಲ್ಲಿ ಹೊಸ ಭರವಸೆ ಮೂಡಿಸಿರುವ ಶ್ರೇಯಸ್ ಅಯ್ಯರ್ ಅವರನ್ನ ಖರೀದಿಸಲು ಅಹಮದಾಬಾದ್ ಫ್ರಾಂಚೈಸಿ ಮುಂದಾಗಿದೆಯಂತೆ. ಅಯ್ಯರ್ ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಅನುಭವವೂ ಇರುವುದರಿಂದ ಅವರಿಗೆ ತಂಡದ ನಾಯಕತ್ವ ವಹಿಸಲು ಅಹಮದಾಬಾದ್ ಚಿಂತನೆ ನಡೆಸಿದೆಯಂತೆ. ಅಲ್ಲದೇ ಭವಿಷ್ಯದ ದೃಷ್ಠಿಯಿಂದಲೂ ಅಯ್ಯರ್, ಅಹಮದಾಬಾದ್ ಫ್ರಾಂಚೈಸಿಯಲ್ಲಿದ್ದರೇ ತಂಡಕ್ಕೂ ಪ್ಲಸ್ ಆಗಲಿದೆ.
ಅಂದಹಾಗೆ ಅಹಮದಾಬಾದ್ ಫ್ರಾಂಚೈಸಿಯೂ ಈಗಾಗಲೇ ಅಯ್ಯರ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಎಲ್ಲಾ ಓಕೆ ಆಗಿದೆಯಂತೆ. ಇದನ್ನು ಹೊರತು ಪಡಿಸಿದರೇ ಅಹಮದಾಬಾದ್ ಫ್ರಾಂಚೈಸಿ ಇನ್ನೂ ಇಬ್ಬರು ಆಟಗಾರರನ್ನು ಖರೀದಿಸಬೇಕು. ಹೀಗಾಗಿ ಎರಡನೇ ಆಟಗಾರನಾಗಿ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ಧಿಕ್ ಪಾಂಡ್ಯಗೆ ಮಣೆ ಹಾಕಲು ಅಹಮದಾಬಾದ್ ಫ್ರಾಂಚೈಸಿ ಪ್ಲಾನ್ ಮಾಡಿಕೊಂಡಿದೆ. ಹಾರ್ಧಿಕ್ ಬ್ಯಾಟಿಂಗ್ , ಬೌಲಿಂಗ್ ನಲ್ಲಿ ತಂಡಕ್ಕೆ ನೆರವಾಗುವುದರ ಜೊತೆಗೆ ಅವರ ಸ್ಟಾರ್ ವ್ಯಾಲ್ಯೂ ತಂಡದ ಬ್ರ್ಯಾಂಡ್ ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿ ಅವರನ್ನ ಬುಟ್ಟಿಗೆ ಹಾಕಿಕೊಳ್ಳಲು ಅಹಮದಾಬಾದ್ ತುದಿಗಾಲಿನಲ್ಲಿ ನಿಂತಿದೆ.
ಇನ್ನು ಮೂರನೇ ಆಟಗಾರನಾಗಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಅಥವಾ ಕ್ವಿಂಟನ್ ಡಿ ಕಾಕ್ ಅವರನ್ನ ಖರೀದಿ ಮಾಡುವ ಸಾಧ್ಯತೆಗಳಿವೆ. ತಂಡದ ಭವಿಷ್ಯದ ದೃಷ್ಠಿಯಿಂದ ನೋಡಿದರೇ ಡಿಕಾಕ್ ಗೆ ಅಹಮದಾಬಾದ್ ಮಣೆ ಹಾಕುವ ಸಾಧ್ಯತೆಗಳಿವೆ. ಒಂದು ವೇಳೆ ಡೇವಿಡ್ ವಾರ್ನರ್ ಅವರನ್ನ ಖರೀಸಿದರೇ ಅವರಿಗೆ ಕ್ಯಾಪ್ಟನ್ಸಿ ನೀಡಬೇಕಾಗುತ್ತದೆ. ಯಾಕಂದರೇ ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಗೆ ನಾಯಕನಾಗಿ ಒಳ್ಳೆಯ ದಾಖಲೆ ಇದೆ.