IND vs SA : ದಕ್ಷಿಣ ಆಫ್ರಿಕಾ ತಂಡಕ್ಕೆ ಕೊರೊನಾ ಕಾಟ
ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಕೊರೊನಾ ಸಂಚಲನ ಮೂಡಿಸಿದೆ.
ತಂಡದ ಸ್ಟಾರ್ ಬ್ಯಾಟ್ಸ್ಮನ್ ಏಡೆನ್ ಮಾರ್ಕ್ರಾಮ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಗುರುವಾರ ನಡೆಸಿದ ಕೊರೊನಾ ಟೆಸ್ಟ್ ನಲ್ಲಿ ಮಾರ್ಕ್ರಾಂ ಅವರಿಗೆ ಕೊರೊನಾ ಪಾಸಿಟಿವ್ ಎಂದು ಬಂದಿದೆ.
ಹೀಗಾಗಿ ಅವರು ದೆಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಮಾರ್ಕ್ರಾಮ್ ಕಳೆದುಕೊಂಡಿದ್ದರು.
ಅವರ ಬದಲಿಗೆ ಯುವ ಆಟಗಾರ ಟ್ರಿಸ್ಟಿಯನ್ ಸ್ಟಬ್ಸ್, ದಕ್ಷಿಣ ಆಫ್ರಿಕಾ ಪರ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.
“ಮೊದಲ ಟಿ20ಐಗೆ ಮಾರ್ಕ್ರಾಮ್ ಲಭ್ಯ ಇರೋದಿಲ್ಲ. ಆತ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಆತನ ಸ್ಥಾನದಲ್ಲಿ ಸ್ಟಬ್ಸ್ ಡೆಬ್ಯೂ ಮಾಡುತ್ತಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ನಾಯಕ ಬಾವುಮಾ ಪಂದ್ಯ ಆರಂಭಕ್ಕೂ ಮುನ್ನಾ ತಿಳಿಸಿದ್ದರು.
ಇನ್ನು ಕೊರೊನಾ ಸೋಂಕಿಗೆ ತುತ್ತಾಗಿರುವ ಮಾರ್ಕ್ರಾಂ ಅವರು ಐದು ದಿನಗಳ ಐಸೋಲೆಷನ್ ನಲ್ಲಿ ಇದ್ದಾರೆ.
ಈ ಹಿನ್ನೆಲೆಯಲ್ಲಿ ಮಾರ್ಕ್ರಾಂ ಅವರು ಕಟಕ್ ನಲ್ಲಿ ನಡೆಯಲಿರುವ 2 ಟಿ 20 ಪಂದ್ಯಕ್ಕೂ ದೂರವಾಗಲಿದ್ದಾರೆ.