ಹೊಸ ಕಾರುಗಳಲ್ಲಿ ಡ್ಯುಯಲ್‌ ಏರ್‌ ಬ್ಯಾಗ್‌ ಕಡ್ಡಾಯ – ಕೇಂದ್ರದ ಆದೇಶ..!

1 min read

ಹೊಸ ಕಾರುಗಳಲ್ಲಿ ಡ್ಯುಯಲ್‌ ಏರ್‌ ಬ್ಯಾಗ್‌ ಕಡ್ಡಾಯ – ಕೇಂದ್ರದ ಆದೇಶ..!

ನವದೆಹಲಿ: ಇನ್ಮುಂದೆ ಹೊಸ ಕಾರುಗಳಲ್ಲಿ ಡ್ಯುಯಲ್‌ ಏರ್‌ಬ್ಯಾಗ್‌ ಕಡ್ಡಾಯವಾಗಿರಬೇಕು ಎಂದು ಕೇಂದ್ರ ಸರ್ಕಾರ ಆದೇಶ ಪ್ರಕಟಿಸಿದೆ. ರಸ್ತೆ ಸುರಕ್ಷತಾ ನಿಯಮದಡಿಯಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾರುಗಳಲ್ಲಿ ಮುಂಭಾಗದ ಸೀಟುಗಳಿಗೆ ಡ್ಯುಯಲ್ ಏರ್‌ಬ್ಯಾಗ್‌ ಕಡ್ಡಾಯಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಾಗೂ ಸುಪ್ರೀಂ ಕೋರ್ಟ್‌ ಸಮಿತಿಯ ಸಲಹೆಗಳನ್ನು ಆಧರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಹೊಸ ನಿಯಮವನ್ನು ಘೋಷಿಸಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಮಾರ್ಕ್ ಅಡಿಯಲ್ಲಿ ಏರ್‌ಬ್ಯಾಗ್‌ ಎಐಎಸ್ 145 ಗುಣಮಟ್ಟದ ಸಾಧನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಇನ್ನೂ ಏಪ್ರಿಲ್‌ 1ರಿಂದ ಎಲ್ಲಾ ಹೊಸ ಕಾರುಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್‌ ಕಡ್ಡಾಯಗೊಳಿಸಬೇಕು ಎಂದು ಹೇಳಿದೆ. ಇದರಿಂದಾಗಿ ಡ್ಯುಯಲ್ ಏರ್‌ಬ್ಯಾಗ್ ಕಡ್ಡಾಯದ ಜೊತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕಾರುಗಳನ್ನು 2021ರ ಆಗಸ್ಟ್ 31 ರಿಂದ ಡ್ಯುಯಲ್ ಏರ್‌ಬ್ಯಾಗ್‌ಗಳೊಂದಿಗೆ ಮಾರಾಟ ಮಾಡಬೇಕಾಗುತ್ತದೆ. ಸುಪ್ರೀಂಕೋರ್ಟ್ ನ ಸಮಿತಿಯ ಸಲಹೆಗಳನ್ನು ಆಧರಿಸಿ ಈ ಹೊಸ ನಿರ್ಧಾರವನ್ನು ಪ್ರಕಟಿಸಲಾಗಿದೆ ಎಂದು ಸಚಿವಾಲಯದ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

BIGG BOSS 8 :  ಕಿಚನ್ ನಂದೇ… ಯಾರು ಬರಂಗಿಲ್ಲಾ ಅಷ್ಟೇ : ಟೆರರ್ ಆದ ನಿರ್ಮಲಾ..! ಚಂದ್ರಕಲಾ ಜೊತೆ ಜಂಗಿ ಕುಸ್ತಿಗೆ ಬಿದ್ದ ನಿರ್ಮಲಾ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd