ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾ ಸಂಸ್ಥೆಯನ್ನು ಮತ್ತೆ ಟಾಟಾ ತನ್ನದಾಗಿಸಿಕೊಂಡಿದೆ. ಬರೋಬ್ಬರಿ 18,000 ಕೋಟಿ ರೂಪಾಯಿಗಳಿಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನ ಟಾಟಾ ತನ್ನದಾಗಿಸಿಕೊಂಡಿದೆ. ಆರ್ಥಿಕವಾಗಿ ತೀವ್ರ ತೊಂದರೆಯಲ್ಲಿರುವ ಏರ್ ಇಂಡಿಯಾದ ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಸಂಸ್ಥೆಯು ಯಶಸ್ವಿ ಬಿಡ್ಡರ್ ಆಗಿ ಹೊರಹೊಮ್ಮಿದೆ.
ಆಟೋ-ಟು-ಸ್ಟೀಲ್ಟಾ–ಟಾಟಾ ಸಮೂಹ ಸಂಸ್ಥೆಯ ಒಡೆತನದ ಟಾಟಾ ಸನ್ಸ್ ಸಂಸ್ಥೆಯು, ಸರ್ಕಾರದ ಶೇ. 100ರಷ್ಟು ಪಾಲುದಾರಿಕೆ ಇರುವ ಏರ್ ಇಂಡಿಯಾದ ಖರೀದಿಗೆ 18,000 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ.
ಅಮದ್ಹಾಗೆ ಏರ್ ಇಂಡಿಯಾ ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಸಲ್ಲಿಸಿರುವ ಬಿಡ್ಗೆ ಅನುಮೋದನೆ ದೊರೆತಿರುವುದಾಗಿ ಅಕ್ಟೋಬರ್ 1ರಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಈಗ ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಸಂಸ್ಥೆಯೇ ಯಶಸ್ವಿ ಬಿಡ್ಡರ್ ಆಗಿ ಆಯ್ಕೆಯಾಗಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.