Air India Flight : ಇಂಜಿನ್ ಆಯಿಲ್ ಸೋರಿಕೆ ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ…
Air India Flight : ಅಮೆರಿಕದ ನೆವಾರ್ಕ್ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸ್ವಲ್ಪದರಲ್ಲೇ ಅಪಘಾತದಿಂದ ತಪ್ಪಿಸಿಕೊಂಡಿದೆ. ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಎಂಜಿನ್ ಆಯಲ್ ಸೋರಿಕೆಯಾಗಿದೆ. ಇದನ್ನು ಗಮನಿಸಿದ ಪೈಲಟ್ಗಳು ತಕ್ಷಣ ಎಚ್ಚೆತ್ತ ಸ್ವೀಡನ್ ನ ಸ್ಟಾಕ್ಹೋಮ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನ ಇಳಿಸಿದ್ದಾರೆ.
ವಿಮಾನದಲ್ಲಿ 300 ಪ್ರಯಾಣಿಕರಿದ್ದರು. ವಿಮಾನದಲ್ಲಿ ಬೆಂಕಿ ತಗುಲುವ ಸಾಧ್ಯತೆ ಇದ್ದ ಕಾರಣ ವಿಮಾನ ಲ್ಯಾಂಡ್ ಆಗುವ ವೇಳೆಗೆ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ನಿಯಂತ್ರಣ ಸಾಧನಗಳನ್ನ ಒದಗಿಸಲಾಗಿತ್ತು.
ಅನಿರೀಕ್ಷಿತ ಘಟನೆಯಿಂದ ವಿಮಾನದ ಪ್ರಯಾಣಿಕರು ಭಯಭೀತರಾದರು. ವಿಮಾನ ಸುರಕ್ಷಿತವಾಗಿ ಇಳಿಸುತ್ತಿದ್ದಂತೆ ಪೈಲಟ್ ಗಳು ನಿಟ್ಟುಸಿರುವ ಬಿಟ್ಟಿದ್ದಾರೆ. ಈ ಕುರಿತು ಮಾತನಾಡಿದ ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು, ಇಂಜಿನ್ನಲ್ಲಿ ತೈಲ ಸೋರಿಕೆ ಕಂಡು ಬಂದ ತಕ್ಷಣವೇ ವಿಮಾನವನ್ನ ಸ್ಟಾಕ್ಹೋಮ್ ನಲ್ಲಿ ಇಳಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Air India Newark-Delhi flight with 300 passengers onboard makes emergency landing in Sweden due to oil leak