ಕರ್ನಾಟಕದ ‘ಕಾಶ್ಮೀರ’ ವಾಯ ಗುಣಮಟ್ಟದಲ್ಲಿ ನ.01 ಗದಗ 02

1 min read

ಕರ್ನಾಟಕದ ‘ಕಾಶ್ಮೀರ’ ವಾಯ ಗುಣಮಟ್ಟದಲ್ಲಿ ನ.01 ಗದಗ 02
ಕಳೆದ ಕೆಲವು ದಿನಗಳಿಂದ ದೆಹಲಿ ವಾಯು ಮಾಲಿನ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅದರ ಗುಣ ಮಟ್ಟದ ಬಗ್ಗೆ ದಿನಕ್ಕೊಂದು ವರದಿಗಳು ಬರುತ್ತಿವೆ. ಅಲ್ಲಿನ ಗಾಳಿಯ ಗುಣಮಟ್ಟ ತೀವ್ರ ಹದಗೆಡುತ್ತಿದೆ. ದೆಹಲಿ ಮಾತ್ರವಲ್ಲದೆ ಕೊಲ್ಕತ್ತ, ಮುಂಬೈನಂತಹ ಮೆಟ್ರೋ ಪಾಲಿಟನ್ ಸಿಟಿಗಳು ಸಹ ಇಂಥಹ ಸಮಸ್ಸೆಯನ್ನ ಹೆದರಿಸುತ್ತಿವೆ.

ಕರ್ನಾಟಕದ ಕಾಶ್ಮೀರ ವಾಯ ಗುಣಮಟ್ಟದಲ್ಲಿ ನ 01
ಕೇಂದ್ರ ವಾಯುಮಾಲಿನ್ಯ ಮಂಡಳಿ ಬಿಡುಗಡೆಮಾಡಿರುವ ಉತ್ತಮ ವಾಯ ಗುಣಮಟ್ಟದ ನಗರಗಳಲ್ಲಿ ರಾಜ್ಯದ ಎರಡು ಜಿಲ್ಲೆಗಳು ಮೊದಲೆರಡು ಸ್ಥಾನವನ್ನ ಗಿಟ್ಟಿಸಿಕೊಂಡಿವೆ. ಕರ್ನಾಟಕದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯ ಮಡಿಕೇರಿ ದೇಶದಲ್ಲೆ ನಂಬರ್ 1 ಸ್ಥಾನವನ್ನ ಪಡೆದುಕೊಂಡಿದೆ. ಮತ್ತು ಗದಗ ಜಿಲ್ಲೆ 02 ನೆ ಸ್ಥಾನವನ್ನ ಪಡೆದುಕೊಂಡಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (Central Pollution Control Board)(CPCB) ಬುಲೆಟಿನ್ ಬಿಡುಗಡೆ ಮಾಡಿ ಹೊರಡಿಸಿರುವ ಪಟ್ಟಿಯಲ್ಲಿ
ವಾಯು ಗುಣಮಟ್ಟ ಸೂಚ್ಯಂಕ (Air Quality Index)(AQI) ಮಡಿಕೇರಿಯಲ್ಲಿ 19 ಮತ್ತು ಗದಗದಲ್ಲಿ 22 ಅಂಕಗಳೊಂದಿಗೆ ಪ್ರಥಮ ಮತ್ತು ದ್ವಿತಿಯ ಸ್ಥಾನವನ್ನ ಅನುಕ್ರಮವಾಗಿ ಪಡೆದಿವೆ.
ಇನ್ನೂ ಉಳಿದ ಕರ್ನಾಟಕದ ಜಿಲ್ಲೆಗಳಾದ ಹುಬ್ಬಳ್ಳಿ (35), ಬಾಗಲಕೋಟೆ (23), ಯಾದಗಿರಿ (30) ಮತ್ತು ಬೀದರ್ (41) ಚಾಮರಾಜನಗರ (44), ಚಿಕ್ಕಮಗಳೂರು (33), ದಾವಣಗೆರೆ (23), ಹಾಸನ (25), ಕೊಪ್ಪಳ (46), ಕೋಲಾರ (50), ಮೈಸೂರು (29), ರಾಮನಗರ (40), ಶಿವಮೊಗ್ಗ (37) ಮತ್ತು ವಿಜಯಪುರ (45) ನೇ ಸ್ಥಾನಗಳನ್ನ ಪಡೆದುಕೊಂಡಿದೆ.

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದ 4ನೇ ಹಾಡು ರಿಲೀಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd