ಬೆಂಗಳೂರು : ಇಡಿ ವಿಶ್ವಕ್ಕೆ ಕೊರೊನಾ ಶಾಪಾ ಅಂಟಿದೆ. ಇದರಿಂದ ಪಾರಾಗಲು ಲಾಕ್ ಡೌನ್ ಮಾಡಲಾಗಿತ್ತು. ಲಾಕ್ ಡೌನ್ ನಿಂದ ಜನ ಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಸಾಕಷ್ಟು ಜನ ತಮ್ಮ ತವರೂ ಬಿಟ್ಟು ಬಹುದೂರದ ಊರುಗಳಲ್ಲಿ ಸಿಲುಕ್ಕಿದ್ದರು. ಅಂತರ್ ಜಿಲ್ಲೆ, ಅಂತರ್ ರಾಜ್ಯ, ವಿದೇಶಗಳಿಂದ ತಮ್ಮ ತವರಿಗೆ ಸೇರಲು ಹರಸಾಹಸ ಪಟ್ಟಿದ್ದಾರೆ, ಪಡುತ್ತಿದ್ದಾರೆ. ಇನ್ನೂ ಸಾರಿಗೆ ವ್ಯವಸ್ಥೆ ಇಲ್ಲದೆ ನರಳುತ್ತಿದ್ದ ಜನರಿಗೆ ಸಾರಿಗೆ ವ್ಯವಸ್ಥೆ ಮಾಡಿದಾಗ ನಿರಾಳ ಭಾವವುಂಟಾಗಿತ್ತು. ಆದರೆ ಬಸ್, ರೈಲು, ವಿಮಾನಗಳಲ್ಲಿ ಯಾವುದು ಸೇಫ್ ಜರ್ನಿ ಅಂತ ಕೇಳಿದ ಪ್ರಶ್ನೆಗೆ ಸಾಕಷ್ಟು ಜನ ವಿಮಾನ ಪ್ರಯಾಣವೇ ಸೇಫ್ ಎಂದು ಹೇಳಿದ್ದಾರೆ.
ಈ ಬಗ್ಗೆ ವಾಯ್ಸ್ ಆಫ್ ಫ್ಯಾಕ್ಸ್ ಎಂಬ ಹೆಸರಿನಡಿ ನಡೆದ ಸಮೀಕ್ಷೆಯಲ್ಲಿ 3500ಕ್ಕೂಹೆಚ್ಚು ಭಾಗಿಯಾಗಿದ್ದರು. 90% ರಷ್ಟು ಜನ ವಿಮಾನ ಪ್ರಯಾಣ ಹೆಚ್ಚು ಸೇಫ್ ಆಗಿದೆ ಎಂದು ಹೇಳಿದ್ದಾರೆ. ಯಾಕೆಂದರೆ ವಿಮಾನ ನಿಲ್ದಾಣಗಳಲ್ಲಿ ಸಂಪರ್ಕರಹಿತ ವ್ಯವಸ್ಥೆ ಇರುತ್ತದೆ. ಸ್ವಚ್ಛತೆಗೆ ಹೆಚ್ಚು ಆಧ್ಯತೆ ನೀಡಲಾಗುತ್ತದೆ. ಹಾಗಾಗಿ ವಿಮಾನ ಪ್ರಯಾಣದಲ್ಲಿ ಸೋಂಕು ಹರಡುವ ಸಾಧ್ಯತೆ ಕಡಿಮೆ ಇದೆ ಎಂದು ವಿಮಾನ ಪ್ರಯಾಣಿಕರು ತಿಳಿಸಿದ್ದಾರೆ.








