ಏರ್ ಹ್ಯಾಂಡ್ ಡ್ರೈಯರ್ ಬಳಸುವ ಮುನ್ನ ಎಚ್ಚರ… ಎಚ್ಚರ..!
ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್ ಗಳು, ಏರ್ಪೋರ್ಟ್ಸ್ , ರೆಸ್ಟೋರೆಂಟ್ ಗಳಲ್ಲಿ ನಾವು ಹ್ಯಾಂಡ್ ವಾಶ್ ಮಾಡಿದಾಗ ಹೈಸ್ಪೀಡ್ ಏರ್ ಡ್ರೈಯರ್ ಗಳ ಮೂಲಕ ಕೈ ಒಣಗಿಸಿಕೊಳ್ತೇವೆ. ಆದ್ರೆ ಇದು ಇನ್ನಷ್ಟು ಕೈಗಳನ್ನ ಕೊಳಕು ಮಾಡುತ್ತದೆ. ಆರೋಗ್ಯಕ್ಕೂ ಒಳ್ಳೆದಲ್ಲ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
ಹೌದು.. ಸೊಸೈಟಿ ಫಾರ್ ಹೆಲ್ತ್‌ಕೇರ್ ಆಫ್ ಅಮೆರಿಕದ ಜರ್ನಲ್ ಇನ್ಫೆಕ್ಷನ್ ಕಂಟ್ರೋಲ್ ಆ್ಯಂಡ್ ಹಾಸ್ಪಿಟಲ್ ಎಪಿಡೆಮಿಯಾಲಜಿಯಲ್ಲಿ ನಡೆದ ಅಧ್ಯಾಯನದಲ್ಲಿ ಈ ಅಂಶ ಬಯಲಾಗಿದೆ. ಈ ಏರ್ ಡ್ರೈಯರ್ ಗಳು ಹೆಚ್ಚಿನ ವೇಗದಲ್ಲಿ ಮಾಲಿನ್ಯವನ್ನು ಹರಡುತ್ತವೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಹೈಸ್ಪೀಡ್ ಏರ್ ಡ್ರೈಯರ್‌ಗಳು ಕಾಗದದ ಟವೆಲ್ ಗಳಿಗೆ ಹೋಲಿಸಿದರೆ ಕೈಗಳ ಮೇಲೆ ಹೆಚ್ಚು ಮಾಲಿನ್ಯವನ್ನು ಬಿಡುವುದರ ಜೊತೆಗೆ, ಕೈ ಒಣಗಿಸುವ ಸಮಯದಲ್ಲಿ, ಅವು ಸೂಕ್ಷ್ಮ ಜೀವಿಗಳನ್ನು ಬಟ್ಟೆಯ ಮೇಲೆ ಹರಡಬಹುದು. ಅಲ್ಲದೇ ಹೆಚ್ಚಿನ ಬ್ಯಾಕ್ಟೀರಿಯಾಗಳನ್ನು ಇತರ ಮೇಲ್ಮೈಗಳಿಗೆ ವರ್ಗಾಯಿಸುತ್ತವೆ ಎಂದು ಅಧ್ಯಯನ ತಿಳಿಸಿದೆ.
ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನ ಹತ್ಯೆ..!
ಯುವತಿಯನ್ನ ಗುಂಡಿಟ್ಟು ಕೊಂದ ಭಗ್ನ ಪ್ರೇಮಿ..!
20 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್..! ಯಾಕೆ ಗೊತ್ತಾ..?