ಅಜೇಯ್ ಜಡೇಜಾ ವಾರ್ನಿಂಗ್…? ರಾಹುಲ್ ದ್ರಾವಿಡ್ ಪಾಠ ಮಾಡಲು ಹೋಗಬೇಡಿ..!

1 min read
rahul dravid saakshatv team india

ಅಜೇಯ್ ಜಡೇಜಾ ವಾರ್ನಿಂಗ್…? ರಾಹುಲ್ ದ್ರಾವಿಡ್ ಪಾಠ ಮಾಡಲು ಹೋಗಬೇಡಿ..!

ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಸದ್ಯದಲ್ಲೇ ಚಾರ್ಜ್ ತೆಗೆದುಕೊಳ್ಳಲಿದ್ದಾರೆ.

ಮುಂದಿನ ನ್ಯೂಜಿಲೆಂಡ್ ಸರಣಿಗೆ ತಂಡವನ್ನು ಸಿದ್ಧಪಡಿಸಬೇಕಾದ ಸವಾಲು ರಾಹುಲ್ ದ್ರಾವಿಡ್ ಗೆ ಇದೆ.

ಅಷ್ಟೇ ಅಲ್ಲ, ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಸಾಕಷ್ಟು ನಿರೀಕ್ಷೆಗಳಿವೆ. ಜೊತೆಗೆ ಅಷ್ಟೇ ಸವಾಲುಗಳು ಕೂಡ ಇವೆ.

ವಿಶ್ವ ಕ್ರಿಕೆಟ್ ನಲ್ಲಿ ರಾಹುಲ್ ದ್ರಾವಿಡ್ ನಲ್ಲಿರುವಷ್ಟು ತಾಳ್ಮೆ, ಶಿಸ್ತು ಮತ್ತು ಬದ್ದತೆ ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ.

ಈಗಾಗಲೇ ಭಾರತ 19 ವಯೋಮಿತಿ, ಭಾರತ ಎ ತಂಡ, ಎನ್ ಸಿಎ ಕೋಚ್ ಆಗಿ ಕೆಲಸ ಮಾಡಿರುವ ರಾಹುಲ್ ದ್ರಾವಿಡ್ ಕಳೆದ ಶ್ರೀಲಂಕಾ ಪ್ರವಾಸಕ್ಕೆ ಕೋಚ್ ಆಗಿ ನೇಮಕಗೊಂಡಿದ್ದರು.

ಇದೀಗ ಟೀಮ್ ಇಂಡಿಯಾದ ಪೂರ್ಣಾವಧಿಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರುತ್ತಾರೆ ಅನ್ನೋ ಕುತೂಹಲವೂ ಇದೆ.

ಈ ನಡುವೆ, ತಂಡದಲ್ಲಿರುವ ಬಹುತೇಕ ಯುವ ಆಟಗಾರರು ದ್ರಾವಿಡ್ ಗರಡಿಯಲ್ಲಿ ಪಳಗಿದವರು. ಹಾಗಾಗಿ ದ್ರಾವಿಡ್ ಅವರ ತರಬೇತಿ ಶೈಲಿ ಯಾವ ರೀತಿ ಇದೆ ಎಂಬುದು ಗೊತ್ತಿರುವ ವಿಚಾರವಾಗಿದೆ.

ಈ ನಡುವೆ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜೇಯ್ ಜಡೇಜಾ ಕಿವಿ ಮಾತೊಂದನ್ನು ಹೇಳಿದ್ದಾರೆ. ಅಜೇಯ್ ಜಡೇಜಾ ಅವರು ಪರೋಕ್ಷವಾಗಿ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

Rahul Dravid saaksha tv

ಶಿಸ್ತು ಮತ್ತು ಬದ್ಧತೆಗೆ ಮತ್ತೊಂದು ಹೆಸರು ರಾಹುಲ್ ದ್ರಾವಿಡ್. ತಂಡದಲ್ಲಿ ಶಿಸ್ತು ಇರಬೇಕು. ಆಟಗಾರರಲ್ಲಿ ಬದ್ಧತೆ ಇರಬೇಕು. ಆಗ ಮಾತ್ರ ಯಶ ಸಾಧಿಸಲು ಸಾಧ್ಯ ಎಂಬುದು ರಾಹುಲ್ ದ್ರಾವಿಡ್ ಮೂಲ ಮಂತ್ರವಾಗಿದೆ.

ಹೀಗಾಗಿ ಬಿಸಿಸಿಐ ಮತ್ತು ಆಯ್ಕೆ ಸಮಿತಿಯು ಎಚ್ಚರಿಕೆಯಿಂದ ಇರಬೇಕು. ಅಷ್ಟೇ ಅಲ್ಲ, ರಾಹುಲ್ ದ್ರಾವಿಡ್ ಅವರಿಗೆ ಪಾಠ ಮಾಡಲು ಹೊಗಬೇಡಿ. ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ ಎಂ¨ ದಾಟಿಯಲ್ಲಿ ಅಜೇಯ್ ಜಡೇಜಾ ಹೇಳಿದ್ದಾರೆ.

ಮುಖ್ಯವಾಗಿ ಟೀಮ್ ಇಂಡಿಯಾದ ಆಯ್ಕೆ ವಿಚಾರವಾಗಿರಬಹುದು.. 11ರ ಬಳಗದ ಆಯ್ಕೆ ವಿಚಾರವಾಗಿರಬಹುದು. ಅದು ದ್ರಾವಿಡ್ ನೋಡಿ ಕೊಳ್ಳುತ್ತಾರೆ.

ಹಾಗಂತ ಆಯ್ಕೆ ಸಮಿತಿಗೆ ಏನು ಕೆಲಸ ಅನ್ನೋ ಪ್ರಶ್ನೆ ಕೂಡ ಮೂಡಬಹುದು. ಅದಕ್ಕೆಲ್ಲಾ ಉತ್ತರ ರಾಹುಲ್ ದ್ರಾವಿಡ್ ಅವರೇ ನೀಡುತ್ತಾರೆ.

ಯಾಕಂದ್ರೆ ದ್ರಾವಿಡ್ ಅವರ ಕಾರ್ಯ ಶೈಲಿಯೇ ಅಂತಹುದ್ದು. ವಿವಿಧ ವಯೋಮಿತಿಯ ಆಟಗಾರರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅವಕಾಶ ನೀಡುವಂತಹ ಗುಣ ದ್ರಾವಿಡ್ ಅವರಲ್ಲಿದೆ.

ಇನ್ನೊಂದೆಡೆ, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾದ ಆಟಗಾರರು 11ರ ಬಳಗದಲ್ಲೂ ಕಾಣಿಸಿಕೊಳ್ಳಬಹುದು.

ಯಾಕಂದ್ರೆ ರಾಹುಲ್ ದ್ರಾವಿಡ್ ತಂಡದಲ್ಲಿರುವ ಎಲ್ಲಾ ಆಟಗಾರರಿಗೂ ಅವಕಾಶ ನೀಡುತ್ತಾರೆ. ಸುಮ್ಮನೆ ಬೆಂಚ್ ಕಾಯಿಸುವುದಿಲ್ಲ.

ಅವಕಾಶ ಎಲ್ಲರಿಗೂ ಸಿಗುತ್ತೆ. ಅದನ್ನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತಾರೆ ಅನ್ನೋದು ಆಟಗಾರರಿಗೆ ಬಿಟ್ಟ ವಿಚಾರವಾಗಿದೆ.

ಒಟ್ಟಿನಲ್ಲಿ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಯಾವ ರೀತಿಯ ಪ್ರದರ್ಶನ ನೀಡುತ್ತೆ ಅನ್ನೋ ಕುತೂಹಲವಂತೂ ಇದ್ದೆ ಇದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd