Ajit Kumar : ತಮಿಳು ಖ್ಯಾತ ನಟ ಅಜಿತ್ ಕುಮಾರ್ ತಂದೆ ಪಿ. ಸುಬ್ರಹ್ಮಣ್ಯಂ ವಿಧಿವಶ…
ತಮಿಳುನಾಡಿನ ಖ್ಯಾತ ನಟ ಅಜಿತ್ ಕುಮರ್ ಅವರ ತಂದೆ ಪಿ. ಸುಬ್ರಮಣ್ಯಂ (86) ತೀವ್ರ ಅನಾರೋಗ್ಯದಿಂದಾಗಿ ಚೆನ್ನೈನ ಸ್ವಾಗೃಹದಲ್ಲಿ ವಿಧಿವಶರಾಗಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ಕುಟುಂಬದ ಸಮ್ಮುಖದಲ್ಲಿ ಬೆಸೆಂಟ್ ನಗರದ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಯಿತು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪಿ.ಸುಬ್ರಮಣ್ಯಂ ಅವರು ಪಾರ್ಶ್ವವಾಯುವಿಗೂ ತುತ್ತಾಗಿದ್ದರು. ನಿರಂತರ ಚಿಕಿತ್ಸೆ ಒದಗಿಸುತ್ತಿದ್ದರೂ ಸಹ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಪತ್ನಿ ಮೋಹಿನಿ ಜತೆಗೆ ಬೆಸೆಂಟ್ ನಗರದ ಮನೆಯಲ್ಲಿ ಸುಬ್ರಮಣ್ಯಂ ವಾಸವಿದ್ದರು. 2020ರ ಸುಮಾರಿಗೆ ಇವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಾದ ಬಳಿಕ ಪಾರ್ಶ್ವವಾಯು ಆವರಿಸಿತ್ತು. ಅಂದಿನಿಂದಲೇ ಪುತ್ರ ಅಜಿತ್ ಕುಮಾರ್ ತಂದೆಗೆ ವಿಶೇಷ ಚಿಕಿತ್ಸೆ ಕೊಡಿಸುತ್ತಿದ್ದರು.
ನಟ ಅಜಿತ್ ತಂದೆ ಪಿ.ಸುಬ್ರಹ್ಮಣ್ಯಂ ಮೂಲತಹ ಕೇರಳದ ಪಾಲಕ್ಕಾಡ್ ಮೂಲದವರು. ಪಶ್ಚಿಮ ಬಂಗಾಳದ ಮೋಹಿನಿಯವರನ್ನು ಮದುವೆಯಾಗಿದ್ದರು. ಈ ದಂಪತಿಯ ಮೂರು ಗಂಡು ಮಕ್ಕಳಲ್ಲಿ ಅಜಿತ್ ನಡುವಿನವರಾಗಿದ್ದಾರೆ. ಪಿ ಸುಬ್ರಮಣ್ಯಂ ಅವರ ನಿಧನಕ್ಕೆ ತಮಿಳು ಚಿತ್ರರಂಗದ ನಟ, ನಟಿಯರೂ ರಾಜಕಾರಣಿಗಳು, ಮತ್ತು ನಟ ಅಜಿತ್ ಕುಮಾರ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
Ajit Kumar : Famous Tamil actor Ajith Kumar’s father P. Subrahmanyam died…