Akash Puri : ಚಾರ್ಮಿಗಾಗಿ ಪತ್ನಿಗೆ ಪೂರಿ ಡಿವೋರ್ಸ್..!

1 min read
akash-puri-about-puri-jagannadh-charmy saaksha tv

akash-puri-about-puri-jagannadh-charmy saaksha tv

Akash Puri : ಚಾರ್ಮಿಗಾಗಿ ಪತ್ನಿಗೆ ಪೂರಿ ಡಿವೋರ್ಸ್..!

ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಮತ್ತು ನಾಯಕಿ ಚಾರ್ಮಿ ನಡುವೆ ಏನೋ ಇದೆ ಎಂಬ ಮಾತುಗಳು ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇವೆ.

ಪುರಿ ಕನೆಕ್ಟ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ ಪುರಿ, ಚಾರ್ಮಿಯೊಂದಿಗೆ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ಇದಲ್ಲದೆ ಇಬ್ಬರೂ ಹೊರಗಿನ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಗಾಸಿಪ್ ಹರಿದಾಡುತ್ತಲೇ ಇದೆ.

ಇದರ ಜೊತೆಗೆ ಪೂರಿ ಪತ್ನಿಗೆ ವಿಚ್ಛೇದನ ನೀಡಲು ಸಿದ್ದರಾಗಿದ್ದಾರೆ ಎಂದು ವರದಿಯಾಗಿದೆ.

ಈ ವದಂತಿಗಳಿಗೆ ಪುರಿ ಪುತ್ರ, ನಾಯಕ ಆಕಾಶ್ ಪುರಿ ಪ್ರತಿಕ್ರಿಯಿಸಿದ್ದಾರೆ. ‘ಅಪ್ಪ ಸಿನಿಮಾದಲ್ಲಿ ಸಾಕಷ್ಟು ಕಳೆದುಕೊಂಡಿದ್ದಾರೆ.

akash-puri-about-puri-jagannadh-charmy saaksha tv
akash-puri-about-puri-jagannadh-charmy saaksha tv

ತಾಯಿಗೆ ಆ ವಿಷಯ ಗೊತ್ತಾಗಿ ನಮಗೆ ಅದು ಗೊತ್ತಾಗಬಾರದು ಎಂದು ತಂಗಿಯನ್ನ ನನ್ನ ಹಾಸ್ಟೆಲ್ ಗೆ ಹಾಕಿದ್ದರು.

ಆಗ ನಾನು ಮೂರನೇ ತರಗತಿಯಲ್ಲಿದ್ದೆ. ನಾನು ನಮ್ಮ ತಂದೆ ದೊಡ್ಡ ಡೈರೆಕ್ಟರ್‌, ಎಲ್ಲವೂ ಸುಖಮಯವಾಗಿ ಎಂದುಕೊಂಡಿದ್ದೆ.

ವರ್ಷಗಳ ನಂತರ ನಮಗೆ ನಿಜವಾದ ವಿಷಯ ಅರ್ಥವಾಯಿತು. ನಾವು ತೊಡುವ ಬಟ್ಟೆಯಿಂದ ಹಿಡಿದು ತಿನ್ನುವ ಆಹಾರದವರೆಗೆ ಎಲ್ಲವೂ ಬದಲಾಗಿದೆ.

ಇದ್ದ ಮನೆ, ಕಾರುಗಳನ್ನೂ ಮಾರಾಟ ಮಾಡಿದ್ದಾರೆ. ಹದಿನೈದು ವರ್ಷ ನರಕ ನೋಡಿದ್ದೇವೆ. ಆದರೆ ನಮ್ಮ ತಂದೆ ಮತ್ತೆ ಪುಟಿದೇಳಿದ್ದು ಸಾಮಾನ್ಯ ಸಂಗತಿಯಲ್ಲ. ನಮ್ಮ ಫ್ಯಾಮಿಲಿ ಈಗ ಇರೋದಕ್ಕೆ ನಮ್ಮ ತಾಯಿಯೇ ಕಾರಣ.

ಅಪ್ಪ – ಅಮ್ಮ ವಿಚ್ಛೇದನದ ಬಗ್ಗೆ ನಾನು ಕೇಳಿಲ್ಲ. ಅಪ್ಪನಿಗೆ ಅಮ್ಮ ದೊಡ್ಡ ಬೆಂಬಲ. ಅವರದು ಲವ್ ಮ್ಯಾರೇಜ್.

ಕೆಲವರು ಟೈಂಪಾಸ್‌ಗಾಗಿ ವಿಚ್ಛೇದನ ಅಂತ ಬರೆಯುತ್ತಿದ್ದಾರೆ. ಆದರೆ ಅದು ನಿಜವಲ್ಲ ಎಂದು ಆಕಾಶ್ ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd