ಲೋಕಸಭಾ ಸ್ಥಾನಕ್ಕೆ ಅಖಿಲೇಶ್ ಯಾದವ್ ಮತ್ತು ಅಜಂ ಖಾನ್ ರಾಜಿನಾಮೆ..
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅವರ ಪಕ್ಷದ ಸಹೋದ್ಯೋಗಿ ಅಜಂ ಖಾನ್ ಅವರು ಉತ್ತರ ಪ್ರದೇಶ ವಿಧಾನಸಭೆಗೆ ಚುನಾಯಿತರಾದ ಕಾರಣ, ಅಜಂಗಢ ಮತ್ತು ರಾಂಪುರದ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಶನಿವಾರ ಲಕ್ನೋದಲ್ಲಿ ಹೊಸದಾಗಿ ಚುನಾಯಿತ ಶಾಸಕರ ಸಭೆ ನಡೆಯಲಿದ್ದು, ಅಖಿಲೇಶ್ ಯಾದವ್ ಅವರು ಎಸ್‌ಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ರಾಜೀನಾಮೆ ಸಲ್ಲಿಸಿದರು. ಎಸ್‌ಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ರಾಮಗೋಪಾಲ್ ಯಾದವ್ ಜೊತೆಗಿದ್ದರು.
ಅಖಿಲೇಶ್ ಯಾದವ್ ಮತ್ತು ಖಾನ್ ತಮ್ಮ ಅಸೆಂಬ್ಲಿ ಸ್ಥಾನಗಳನ್ನು ತೊರೆದು ಲೋಕಸಭೆ ಸದಸ್ಯತ್ವವನ್ನು ಉಳಿಸಿಕೊಳ್ಳುತ್ತಾರೆ ಎಂಬ ಊಹಾಪೋಹ ಈ ಹಿಂದೆ ಇತ್ತು. ರಾಜೀನಾಮೆಗೆ ಮುನ್ನ ಅಖಿಲೇಶ್ ಯಾದವ್ ಅವರು ಮಾರ್ಚ್ 18 ರಂದು ಕರ್ಹಾಲ್‌ನಲ್ಲಿ ಎಸ್‌ಪಿ ಪದಾಧಿಕಾರಿಗಳು ಮತ್ತು ಬೆಂಬಲಿಗರನ್ನು ಭೇಟಿ ಮಾಡಿದರು.
ಅಖಿಲೇಶ್ ಯಾದವ್ 1,48,000 ಮತಗಳನ್ನು ಪಡೆದು ಕರ್ಹಾಲ್ ವಿಧಾನಸಭಾ ಕ್ಷೇತ್ರವನ್ನ 67,504 ಮತಗಳ ಅಂತರದಿಂದ ಗೆದ್ದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ ನಗರ ಕ್ಷೇತ್ರದಲ್ಲಿ 1,00,000 ಮತಗಳ ಅಂತರದಿಂದ ಗೆದ್ದಿದ್ದಾರೆ.
Akhilesh Yadav, Azam Khan resign from Lok Sabha