ಬೆಳಗಾವಿ: ದುಷ್ಕರ್ಮಿಗಳ ತಂಡವೊಂದು ಪ್ರೇಮಿಗಳೆಂದು ಭಾವಿಸಿ, ಅಕ್ಕ- ತಮ್ಮನ ಮೇಲೆ ಹಲ್ಲೆ ನಡೆಸಿರುವ ಜಿಲ್ಲೆಯಲ್ಲಿ ನಡೆದಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿಸಿರುವ ಕುರಿತು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ. ನಗರದಲ್ಲಿನ ಕೋಟೆ ಕೆರೆಯಲ್ಲಿ ಸಚಿನ್ ಹಾಗೂ ಮುಸ್ಕಾನ್ ಕುಳಿತಿದ್ದರು. ಈ ಸಂದರ್ಭದಲ್ಲಿ ಯುವಕರ ಗುಂಪು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 9 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರಿದ್ದಾರೆ. ಮೊಮ್ಮಹದ್ ಇನಾಮದಾರ್ (22), ಆತೀಫ್ ಅಹಮ್ಮದ್ ಶೇಖ್ (22), ಮೊಹಮ್ಮದ್ ಅಮನ್(27), ಸೈಫಲಿ ಮಗ್ದುಮ್ (27), ಉಮರ ಬಡೇಗರ್ (19), ಅಜಾನ್ ಕಾಲಕುಂದ್ರಿ (19), ರಿಯಾನ್ ರೋಟವಾಲೆ (19) ಬಂಧಿತರು. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.








