ಬೆಂಗಳೂರು: ಇಲ್ಲಿಯ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ(NIA Special Court) ಇಬ್ಬರು ಅಲ್ ಖೈದಾ (Al-Qaeda) ಉಗ್ರರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಖ್ತರ್ ಹುಸೇನ್ ಲಷ್ಕರ್ ಮತ್ತು ಅಬ್ದುಲ್ ಅಲೀಂ ಮೊಂಡಲ್‌ಗೆ ಕೋರ್ಟ್ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಅವರ ವಿರುದ್ಧ 2022ರಲ್ಲಿಯೇ ಪ್ರಕರಣ ದಾಖಲಾಗಿತ್ತು. ಆರೋಪಿತ ಉಗ್ರರು ವಿದೇಶದಲ್ಲಿನ ಹ್ಯಾಂಡ್ಲರ್ ಗಳಿಂದ ಆನ್ ಲೈನ್ ಮೂಲಕ ಮನ ಪರಿವರ್ತನೆಗೊಂಡು ಅಲ್ ಖೈದಾಗೆ ಹೊಸ ಯುವಕರನ್ನು ಸೇರ್ಪಡೆ ಮಾಡುತ್ತಿದ್ದರು. ನಂತರ ಟೆಲಿಗ್ರಾಂ ಗ್ರೂಪ್ ಗಳಿಗೆ ಸೇರಿಸಿ ಆಪ್ಘಾನಿಸ್ತಾನಕ್ಕೆ ತೆರಳಲು ಪ್ಲಾನ್ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆಸ್ಸಾಂ ಮೂಲದ ಅಖ್ತರ್ ಹುಸೇನ್ ನನ್ನು ಬಂಧಿಸಿದ್ದರು. ಆತ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತ ಬೆಂಗಳೂರಿನ ಪ್ರಮುಖ ಹೋಟೆಲ್ ಹಾಗೂ ವಿಧಾನಸೌಧಕ್ಕೆ ಬಂದು ಹೋಗುವ ನಾಯಕರಿರುವ ಪ್ರಮುಖ ಹೋಟೆಲ್ ನ್ನೇ ಟಾರ್ಗೆಟ್ ಮಾಡಿದ್ದ ಎನ್ನಲಾಗಿದೆ. ಈತ ಆಲ್ ಖೈದಾ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಕುರಿತು ತೆಲಂಗಾಮ ಹಾಗೂ ಕೇಂದ್ರ ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು.