ಇಡೀ ದೇಶದಲ್ಲಿ ಮದ್ಯ ನಿಷೇಧ ಆಗಬೇಕು : ಸಂತೋಷ್ ಲಾಡ್
ಧಾರವಾಡ : ಕೆಲ ರಾಜ್ಯಗಳಲ್ಲಿ ಮದ್ಯ ನಿಷೇಧ ಮಾಡಿ, ಕೆಲ ರಾಜ್ಯಗಳಲ್ಲಿ ಚಾಲ್ತಿ ಇಡಬಾರದು. ಮದ್ಯ ಮಾರಾಟ ಎಲ್ಲ ಕಡೆ ನಿಷೇಧವಾಗಬೇಕು, ಇಡೀ ದೇಶದಲ್ಲಿ ಮದ್ಯ ನಿಷೇಧ ಆಗಬೇಕು ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಕ್ಷದಲ್ಲಿ ನಡೆಯುತ್ತಿರುವ ಸದ್ಯದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚು, ಎಲ್ಲ ಪಕ್ಷಗಳಲ್ಲಿ ಗುಂಪುಗಾರಿಕೆ ಇದ್ದೇ ಇದೆ. ಕಾಂಗ್ರೆಸ್ ನಲ್ಲಿ ಅಷ್ಟೇ ಅಲ್ಲ, ಬಿಜೆಪಿಯಲ್ಲಿ ಈಗ ಅವರನ್ನ ಇಳಿಸಲು ಇವರು, ಇವರನ್ನ ಇಳಿಸಲು ಅವರು ಹೊರಟಿದ್ದಾರೆ ಎಂದರು.
ಇನ್ನು ಮುಂದಿನ ಸಿಎಂ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ಯಾರೊಬ್ಬರ ಫಾಲೋವರ್ ಅಲ್ಲ, ಕಾಂಗ್ರೆಸ್ ಫಾಲೋವರ್, ನಮ್ಮ ಹೈಕಮಾಂಡ್ ಹೇಳಿದ್ದೇ ಫೈನಲ್. ಕೆಲವರು ಈಗಲೇ ನಮ್ಮ ಮುಖಂಡರಿಗೆ ಸಿಎಂ ಎಂದು ಹೇಳುತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ, ಚುನಾವಣೆ ಆಗಬೇಕು, ನಂತರ ಸಿಎಂ ಯಾರು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ಇದೇ ವೇಳೆ ಮದ್ಯ ನಿಷೇಧದ ಬಗ್ಗೆ ಮಾತನಾಡಿ, ಕೆಲ ರಾಜ್ಯಗಳಲ್ಲಿ ಮದ್ಯ ನಿಷೇಧ ಮಾಡಿ, ಕೆಲ ರಾಜ್ಯಗಳಲ್ಲಿ ಚಾಲ್ತಿ ಇಡಬಾರದು. ಮದ್ಯ ಮಾರಾಟ ಎಲ್ಲ ಕಡೆ ನಿಷೇಧವಾಗಬೇಕು, ಇಡೀ ದೇಶದಲ್ಲಿ ಮದ್ಯ ನಿಷೇಧ ಆಗಬೇಕು. ಮದ್ಯ ಇಲ್ಲದೆ ಸರ್ಕಾರ ಇಲ್ಲ ಅಂತಾರೆ, ಅದನ್ನು ನಾನು ಒಪ್ಪುತ್ತೇನೆ. ಆದರೆ ಅಕ್ರಮ ಮದ್ಯ ಮಾರಾಟವಾದರೂ ಬಂದ್ ಆಗಲಿ ಎಂದು ಹೇಳಿದರು.