ನಟ ಅಲ್ಲು ಅರ್ಜುನ್ ಜೊತೆ ನಟಿಸಲು ಉತ್ಸುಕಳಾಗಿದ್ದೇನೆ – ಆಲಿಯಾ ಭಟ್
ನಟ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದು ನಟಿ ಆಲಿಯಾ ಭಟ್ ಬಹಿರಂಗಪಡಿಸಿದ್ದಾರೆ. ತಮ್ಮ ಇಡೀ ಕುಟುಂಬ ಅಲ್ಲು ಅರ್ಜುನ್ ಗೆ ಅಭಿಮಾನಿಗಳಾಗಿದ್ದೇವೆ ಎಂದು ಆಲಿಯಾ ಬಹಿರಂಗಪಡಿಸಿದ್ದಾರೆ
“ನನ್ನ ಇಡೀ ಕುಟುಂಬ ಪುಷ್ಪ ಚಿತ್ರವನ್ನ ನೋಡಿದೆ ಮತ್ತು ಅಲ್ಲು ಅರ್ಜುನ್ ಅವರ ಅಭಿಮಾನಿಗಳಾಗಿದ್ದೇವೆ. ಅವರ ಎದುರಿಗೆ ಜೋಡಿಯಾಗುವ ಅವಕಾಶ ಯಾವಾಗ ಸಿಗುತ್ತದೆ ಎಂದು ಮನೆಯರು ಕೇಳುತ್ತಿದ್ದಾರೆ ಎಂದು ಆಲಿಯಾ ತಿಳಿಸಿದ್ದಾಳೆ.
ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅವರ ಪುಷ್ಪ ಎಂಬ ಆಕ್ಷನ್ ಎಂಟರ್ಟೈನರ್ ಕಳೆದ ವರ್ಷ ಡಿಸೆಂಬರ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಅವರು ಮೈತ್ರಿ ಮೂವೀ ಮೇಕರ್ಸ್ನ ಮುತ್ತಂಶೆಟ್ಟಿ ಮೀಡಿಯಾ ಸಹಯೋಗದೊಂದಿಗೆ ನಿರ್ಮಾಣ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪ: ದಿ ರೂಲ್ ಎಂಬ ಎರಡನೇ ಭಾಗ ಮುಂದಿನ ಡಿಸೆಂಬರ್ ಗೆ ಬಿಡುಗಡೆಯಾಗಲಿದೆ.