KGF | ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಿ ಅಲ್ಲು ಅರ್ಜುನ್ ಹೇಳಿದ್ದೇನು..?
ದೇಶದೆಲ್ಲೆಡೆ ಈಗ ದಕ್ಷಿಣ ಭಾರತದ ಸಿನಿಮಾಗಳ ಹವಾ ಜೋರಾಗಿದೆ.
ಬಾಹುಬಲಿ (1, 2), ಕೆಜಿಎಫ್, ಪುಷ್ಪಾ, ಆರ್.ಆರ್.ಆರ್. ಕೆಜಿಎಫ್ ಚಾಪ್ಟರ್ 2 ಸಿನಿಮಾಗಳ ಹವಾ ಜೋರಾಗಿದೆ.
ಸದ್ಯ ಬಾಕ್ಸ್ ಆಫೀಸ್ ಮೇಲೆ ದಂಡ ಯಾತ್ರೆ ನಡೆಸುತ್ತಿದ್ದು, ಸಿನಿಮಾ ನೋಡಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೆಜಿಎಫ್ ಸಿನಿಮಾವನ್ನು ಹೊಗಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಲ್ಲು, ‘ಕೆಜಿಎಫ್ 2 ಚಿತ್ರ ಘಟಕಕ್ಕೆ ಶುಭಾಶಯಗಳು. ಯಶ್, ನಿಮ್ಮ ನಟನೆ ಅದ್ಭುತವಾಗಿದೆ.
ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮುಂತಾದ ನಟರೆಲ್ಲರೂ ಉತ್ತಮವಾಗಿ ನಟಿಸಿದ್ದಾರೆ.
ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಬೇರೆ ಲೆವೆಲ್ ನಲ್ಲಿದೆ. ಭುವನಗೌಡ ಛಾಯಾಗ್ರಹಣ ಎಕ್ಸೆಲೆಂಟ್ ಆಗಿದೆ.
ತಂತ್ರಜ್ಞರ ಅಪಾರ ಕಾರ್ಯಕ್ಕೆ ನನ್ನ ನಮನಗಳು,” ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ‘ಪ್ರಶಾಂತ್ ನೀಲ್ ನೀವು ಅದ್ಭುತ ಸಿನಿಮಾ ನೀಡಿದ್ದೀರಿ.
ಇಂತಹ ಉತ್ತಮ ಅನುಭವವನ್ನು ನೀಡಿದ್ದಕ್ಕಾಗಿ ಮತ್ತು ಭಾರತೀಯ ಚಿತ್ರರಂಗದ ಖ್ಯಾತಿಯನ್ನು ಹೆಚ್ಚಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಬನ್ನಿ ಬರೆದಿದ್ದಾರೆ.
allu-arjun-praises-actor-yash-and-kgf-2