‘ಪುಷ್ಪ’ ಹೊಗಳಿದ ಕರಣ್ ಜೋಹರ್ , ಜಾಹ್ನವಿ – ಥ್ಯಾಂಕ್ಸ್ ಹೇಳಿದ ಅಲ್ಲು
ಡಿಸೆಂಬರ್ 17 ಕ್ಕೆ ವಿಶ್ವಾದ್ಯಂತ ಅದ್ಧೂರಿಯಾಗಿ ರಿಲೀಸ್ ಆದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಸ್ಪ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ರೆಕಾರ್ಡ್ ಮುರಿದಿದೆ.. ಇದೀಗ ಅಮೇಜಾನ್ ನಲ್ಲಿ ಅಬ್ಬರಿಸುತ್ತಿರುವ ಈ ಸಿನಿಮಾವನ್ನ ಸೌತ್ ಇಂಡಿಯನ್ ಸ್ಟಾರ್ ಗಳಷ್ಟೇ ಅಲ್ದೇ ಬಾಲಿವುಡ್ ನವರು ಮೆಚ್ಚಿಕೊಂಡಿದ್ದಾರೆ..
ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ , ಯುವ ನಟಿ ಜಾಹ್ನವಿ ಕಪೂರ್ , ಅರ್ಜುನ್ ಕಪೂರ್ ಸಿನಿಮಾ ನೋಡಿ ಮೆಚ್ಚಿ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.. ಅಲ್ಲದೇ ಅವರಿಗೆ ಅಲ್ಲು ಕೂಡ ಧನ್ಯವಾದಗಳನ್ನ ಅರ್ಪಿಸಿದ್ದಾರೆ.. ಚಿತ್ರವು ಥಿಯೇಟರ್ಗಳಲ್ಲಿ 25 ದಿನಗಳನ್ನು ಪೂರೈಸುತ್ತಿದೆ ಮತ್ತು ಇನ್ನೂ ಅಸಾಧಾರಣವಾಗಿ ಪ್ರದರ್ಶನ ಕಾಣುತ್ತಿದೆ. ಅನೇಕ ಸೆಲೆಬ್ರಿಟಿಗಳು ಚಿತ್ರವನ್ನು ವೀಕ್ಷಿಸಿದ್ದಾರೆ ಮತ್ತು ಮನರಂಜನೆಗಾಗಿ ತಂಡವನ್ನು ಶ್ಲಾಘಿಸಿದ್ದಾರೆ.
ಇತ್ತೀಚೆಗೆ, ಕರಣ್ ಜೋಹರ್ ಪುಷ್ಪಾ ಸಿನಿಮಾವನ್ನ ವೀಕ್ಷಿಸಿದ್ದಾರೆ.. ಮತ್ತು ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. “ಅಲ್ಲು ಅರ್ಜುನ್ @AlluArjun in #Pushpa !!!!! ಇನ್ಕ್ರೆಡಿಬಲ್!!!! ಎಂತಹ ಸ್ಟಾರ್ಡಮ್! ಎಂತಹ ಪ್ರದರ್ಶನ!!!!!! ಹೊಗಳಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಲ್ಲು “ಕರಣ್ ಜಿ ತುಂಬಾ ಧನ್ಯವಾದಗಳು. ನೀವು ಹಾಗೆ ಭಾವಿಸಿದ್ದೀರಿ ಎಂದು ತಿಳಿದು ಹೃದಯಕ್ಕೆ ತುಂಬಾ ಖುಷಿಯಾಯ್ತು. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ..
ಅಂತೆಯೇ, ಜಾನ್ವಿ ಕಪೂರ್ OTT ಪ್ಲಾಟ್ ಫಾರ್ಮ್ನಲ್ಲಿ ಸಿನಿಮಾದ ಫೋಟೋ ತೆಗೆದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ಅಲ್ಲು ಅರ್ಜುನ್ ಅವರನ್ನು ” ಕೂಲೆಸ್ಟ್ ಮ್ಯಾನ್ ಆಫ್ ದ ವರ್ಲ್ಡ್” ಎಂದು ಬರೆದುಕೊಂಡಿದ್ದಾರೆ.. ಅಲ್ಲು ಪ್ರತಿಕ್ರಿಯಿಸಿ “ಧನ್ಯವಾದಗಳು ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು @janhvikapoor” ಎಂದು ಬರೆದಿದ್ದಾರೆ.